Breaking News
   
   
   

ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಗೆ ಪಾಂಡಂಡ ಕೆ. ಬೋಪಣ್ಣ ಚಾಲನೆ

ಕೊಡಗು

news-details

ಗೋಣಿಕೊಪ್ಪ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಎಂ. ಕುಟ್ಟಪ್ಪ ಜ್ಞಾಪಕಾರ್ಥ ನವೆಂಬರ್ 6 ರವರೆಗೆ ಆಯೋಜಿಸಿರುವ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಗೆ ಗುರುವಾರ ಚಾಲನೆ ನೀಡಲಾಯಿತು.


ಪಾಂಡಂಡ ಎಂ. ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶೃದ್ದಾಂಜಲಿ ಸಲ್ಲಿಸಲಾಯಿತು. 21 ವರ್ಷಗಳ ಹಾಕಿ ನಮ್ಮೆ ಆಚರಣೆ ಕೇವಲ ಕ್ರೀಡೆಯಾಗಿ ಉಳಿಯಲಿಲ್ಲ. ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಪದ್ದತಿ ಪರಂಪರೆ ಪೋಷಣೆಗೂ ನಾಂದಿಯಾಗಿದೆ. ಕುಟುಂಬಗಳ ನಡುವೆ ಒಗ್ಗಟ್ಟು ಮೂಡಲು ಕಾರಣಕರ್ತರಾಗಿದ್ದಾರೆ. ಲಿಮ್ಕಾ ಬುಕ್ ದಾಖಲೆ ಕೂಡ ವಿಶ್ವಮಟ್ಟದಲ್ಲಿ ಕೊಡವ ಹಾಕಿಯನ್ನು ಗುರುತಿಸುವಂತಾಗಿದೆ ಎಂಬ ಮೆಚ್ಚುಗೆಯ ಮಾತುಗಳು ಗಣ್ಯರಿಂದ ವ್ಯಕ್ತಗೊಂಡವು.


ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ (ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರ ಪುತ್ರ) ಪಾಂಡಂಡ ಕೆ. ಬೋಪಣ್ಣ ಬೆಳ್ಳಿ ಸ್ಟಿಕ್ ಮೂಲಕ ಉದ್ಘಾಟಿಸಿ ಮಾತನಾಡಿ, ಕೊಡವ ಹಾಕಿ ಪೋಷಣೆಗೆ ತಂದೆಯ ಎರಡು ಕನಸು ಈಡೇರಿಸಲು ಶ್ರಮಿಸಲಾಗುವುದು ಎಂದರು. ತಂದೆಯ ಸಹೋಧರ ಕಾಶಿ ಪೊನ್ನಪ್ಪ ಅವರೊಂದಿಗೆ ಸೇರಿಕೊಂಡು ಕೊಡವ ಕೌಟುಂಬಿಕ ಹಾಕಿ ನಮ್ಮೆ ಆರಂಭಿಸಿದ್ದರು. ನಂತರದ ದಿನಗಳಲ್ಲಿ ನಮ್ಮೆಯ ವಿಶೇಷ ಪ್ರದರ್ಶನ ನೀಡಿದ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜಿಸಲು ಚಿಂತನೆ ನಡೆಸಿದ್ದರು. ಕೊಡವ ಹಾಕಿಗೆ ಪ್ರತ್ಯೇಕ ಮೈದಾನ, ಮೂಲಭೂತ ವ್ಯವಸ್ಥೆ ಒಂದೇ ಕಡೆಯಲ್ಲಿ ದೊರೆಯುವಂತೆ ಮಾಡಲು ಉತ್ಸುಕರಾಗಿದ್ದರು. ಇದನ್ನು ಅನುಷ್ಠಾನಗೊಳಿಸಲಾಗುವುದು. ಕೊಡವ ಹಾಕಿ ಉಳಿವಿಗೆ ಅಕಾಡೆಮಿ ಮೂಲಕ ತೊಡಗಿಕೊಳ್ಳಲಾಗುವುದು ಎಂದರು.


ಜೀವ ವೈವಿಧ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಗಾಳಿಯಲ್ಲಿ ಗುಂಡು ಹೊಡೆದು ಟೂರ್ನಿಗೆ ಸಾಂಪ್ರಾದಾಯಿಕವಾಗಿ ಚಾಲನೆ ನೀಡಿದರು. 
 

news-details