Breaking News
   
   
   

ಶಾಸಕರಾಗಿ ಎರಡು ವರ್ಷದ ಹರ್ಷ-ಶಾಸಕ ಡಾ.ಮಂತರ್ ಗೌಡರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಅಭಿನಂದನೆ…..

ಕೊಡಗು

news-details

ಸೋಮವಾರಪೇಟೆ : ಶಾಸಕ ಡಾ.ಮಂತರ್‌ಗೌಡ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ  ಸೋಮವಾರಪೇಟೆಯ ಶಾಸಕರ ನಿವಾಸದಲ್ಲಿ ಡಾ.ಮಂತರ್ ಗೌಡ ಹಾಗೂ ದಿವ್ಯಾ ಮಂತರ್ ದಂಪತಿ ಗೋಪೂಜೆ ನೆರವೇರಿಸಿದರು.  ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರು ಶಾಸಕರ ನಿವಾಸಕ್ಕೆ  ಆಗಮಿಸಿ, ಆಶೀರ್ವಾದ ಮಾಡಿದರು. ಈ ಸಂದರ್ಭ  ಶಾಸಕ ಡಾ.ಮಂತರ್ ಗೌಡ ಹಾಗೂ ದಿವ್ಯಾ ಮಂತರ್ ದಂಪತಿ ಸ್ವಾಮೀಜಿಗಳ  ಪಾದಪೂಜೆ ನೆರವೇರಿಸಿದರು. ಈ ಸಂದರ್ಭ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು. ಶಾಸಕ ದಂಪತಿಗೆ ಆಶೀರ್ವಾದ ಮಾಡಿದರು. ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ ಅವರ ಕುಟುಂಬಸ್ಥರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸೇರಿದಂತೆ ಮತ್ತೀತರರು ಇದ್ದರು.

ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ನೆರೆದಿದ್ದ ಗಣ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸೇರಿದಂತೆ ಮತ್ತೀತರರ ಮೊಗದಲ್ಲಿ ಹರ್ಷ ಮೂಡಿತ್ತು. ಈ ದೃಶ್ಯ ಕಂಡುಬAದಿದ್ದು,  ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಸೋಮವಾರಪೇಟೆಯ ನಿವಾಸದಲ್ಲಿ. ಡಾ.ಮಂತರ್ ಗೌಡ ಅವರು, ಶಾಸಕರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ  ಗಣ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸೇರಿದಂತೆ ಮತ್ತೀತರರು ಶಾಸಕ ಡಾ.ಮಂತರ್ ಗೌಡ ಅವರನ್ನು  ಅಭಿನಂದಿಸಿ, ಶುಭಕೋರಿದರು.   ಸೋಮವಾರಪೇಟೆಯ ಶಾಸಕರ ನಿವಾಸದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ  ಶಾಸಕ ಡಾ.ಮಂತರ್ ಗೌಡ ಅವರು ಸುದ್ದಿಗಾರರೊಂದಿಗೆ  ಮಾತನಾಡಿ,  ಕಾಂಗ್ರೆಸ್ ಕಾರ್ಯಕರ್ತರ ಶ್ರಮ, ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ಕ್ಷೇತ್ರದ ಮತದಾರರ ಋಣವನ್ನ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮೂಲಕ ತೀರಿಸಬೇಕಾಗಿದೆ. ಪಂಚ ಗ್ಯಾರೆಂಟಿಗಳ ಮೂಲಕ ರೈತರು, ಬಡವರು ಕೂಲಿ ಕಾರ್ಮಿಕರು ಹಾಗು ಮಹಿಳೆಯರಿಗೆ  ಸರ್ಕಾರ ಸಹಾಯ ಮಾಡುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದೆಂದರು.
ಬೈಟ್-
ಶಾಸಕ ಡಾ.ಮಂತರ್ ಗೌಡ ಅವರ ಪತ್ನಿ ದಿವ್ಯಾ ಮಂತರ್ ಅವರು ಟಿವಿ ಒನ್‌ನೊಂದಿಗೆ ಹರ್ಷ ವ್ಯಕ್ತಪಡಿಸಿದರು.
ಬೈಟ್-
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಟಿವಿ ಒನ್ ನೊಂದಿಗೆ ಮಾತನಾಡಿ, ಕೊಡಗಿನ ಇಬ್ಬರು ಶಾಸಕರು ಗೆದ್ದು ಇಂದಿಗೆ ಎರಡು ವರ್ಷಗಳಾಗಿದ್ದು, ಈ ಎರಡು ವರ್ಷಗಳ ಅವಧಿಯಲ್ಲಿ ಇಬ್ಬರು ಶಾಸಕರು, ಕೊಡಗಿನಲ್ಲಿ ಉತ್ತಮವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ಅಭಿವೃದ್ದಿಯ ಸಂದೇಶ ರವಾನಿಸಿದ್ದಾರೆ.  ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದನೆಗಳು ಮುಂದಿನ ಮೂರು ವರ್ಷಗಳು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜಕೀಯವಾಗಿ ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂದು ಶುಭಕೋರಿದರು.
ಬೈಟ್-
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಟಿವಿ ಒನ್‌ನೊಂದಿಗೆ ಮಾತನಾಡಿ, ಎರಡು ವರ್ಷಗಳ ಹಿಂದೆ ಮೇ.13ರಂದು ಕೊಡಗಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾದ ದಿನ. ಈ ಹಿನ್ನೆಲೆಯಲ್ಲಿ ಇವತ್ತು ಸಂಭ್ರಮ ಸಡಗರದಲ್ಲಿದ್ದೇವೆ. ಇದರ ಹಿಂದೆ ಸಾಧನೆ ಇದೆ ಎಂದರಲ್ಲದೇ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಸಹಸ್ರಾರು ಕೋಟಿ ಅನುದಾನವನ್ನು ತರುವ ಮೂಲಕ ದಾಖಲೆ ಪ್ರಮಾಣದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಕಡೆಗೆ ಕ್ಷೇತ್ರವನ್ನು ಮುನ್ನೆಡೆಸುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಬೈಟ್-
ಟಿವಿ ಒನ್ ನ್ಯೂಸ್, ಮಡಿಕೇರಿ ಮತ್ತು ಸೋಮವಾರಪೇಟೆ

 

news-details