Breaking News
   
   
   

ಮುದ್ದಂಡ ಕಪ್ ಹಾಕಿ ಉತ್ಸವ- ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕಂಬೀರAಡ ತಂಡ……

ಕೊಡಗು

news-details

ಮಡಿಕೇರಿ  : ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್ನಲ್ಲಿ ಕಂಬೀರAಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನ ಸಂಖ್ಯೆ 2ರಲ್ಲಿ ಕಂಬೀರAಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದವು. ಈ ಹಿನ್ನೆಲೆ  ಅಳವಡಿಸಲಾದ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರAಡ ತಂಡ ಜಯಭೇರಿ ಬಾರಿಸಿತು.  ಕಂಬೀರAಡ ಪರ ಪೊನ್ನಮ್ಮ 2 ಗೋಲು ದಾಖಲಿಸಿದರು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಪಾರ್ವತಿ ತಲಾ 1 ಗೋಲು ಬಾರಿಸಿದರು. ಕೇಚೆಟ್ಟಿರ ಪಾರ್ವತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. 
ಟಿವಿ ಒನ್ ನ್ಯೂಸ್, ಮಡಿಕೇರಿ 

news-details