Breaking News
   
   
   

ಅನಧಿಕೃತ ಬಡಾವಣೆಗಳಲ್ಲಿ ಜಮೀನು ಖರೀದಿಸಿದ್ದರೆ ಎಚ್ಚರ!

ರಾಜ್ಯ

news-details

ಅನಧಿಕೃತ ಬಡಾವಣೆಗಳಲ್ಲಿ ಜಮೀನು ಖರೀದಿಸಿದ್ದರೆ ಎಚ್ಚರ!

ಮುಟ್ಟುಗೋಲು ಹಾಕಲು ಡಿಸಿಗಳಿಗೆ ಸಿಕ್ಕಿದೆ ಸೂಚನೆ

ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಜಮೀನುಗಳನ್ನು ಮುಟ್ಟುಗೋಲು ಹಾಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹೊಸ ಅನಧಿಕೃತ ಬಡಾವಣೆಗಳ ಜಮೀನುಗಳನ್ನು ಮುಟ್ಟು ಗೋಲು ಹಾಕಲು ಡಿಸಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಅನಧಿಕೃತ ಬಡಾವಣೆ ಮಾಡಿದರೆ ಇನ್ನು ಮುಂದೆ ತಲೆ ಎತ್ತಬಾರದು. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಕೂಡಾ ಅನಧಿಕೃತ ಬಡಾವಣೆಗಳ ಕುರಿತಾಗಿ ಛೀಮಾರಿ ಹಾಕಿದೆ. ಹೀಗಾಗಿ ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
  
ಹೊಸದಾಗಿ ಬಡಾವಣೆ ನಿರ್ಮಿಸುತ್ತಿರುವವರು ಅಗತ್ಯ ಮಂಜೂರಾತಿ ಹಾಗೂ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು. ಅನಧಿಕೃತವಾಗಿ ಕಂದಾಯ ಭೂಮಿಯಲ್ಲಿ ಬಡಾವಣೆ ರಚಿಸುವುದಕ್ಕೆ ಕಡಿವಾಣ ಹಾಕಲಾಗುವುದು. ಅಕ್ರಮ ಬಡಾವಣೆ ನಿರ್ಮಿಸುತ್ತಿದ್ದರೆ ಅಂತಹವರ ಜಮೀನನ್ನು ಮುಟ್ಟುಗೋಲು ಹಾಕಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಜನವಸತಿ ಪ್ರದೇಶಗಳ 2 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ

ಸುಮಾರು ಹಾಡಿ, ತಾಂಡ ಜನವಸತಿ ಪ್ರದೇಶಗಳು ಕಂದಾಯ ಗ್ರಾಮವಾಗಿಲ್ಲ. ಹೀಗಾಗಿ ಅಲ್ಲಿನ ಜನರು ಸರ್ಕಾರದ ಅನುಕೂಲಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತಂದು ಕಂದಾಯ ಗ್ರಾಮದ ಸ್ಥಾನ‌ಮಾನವನ್ನು ವಸತಿ ಪ್ರದೇಶಕ್ಕೆ ನೀಡಲಾಗುವುದು. ಅಲ್ಲದೆ, ಅಲ್ಲಿನ ಜನರಿಗೆ ಹಕ್ಕು ಪತ್ರ ಕೊಟ್ಟು ಪರಿಹಾರ ನೀಡಲು, ಕಾನೂನಿನ ಆಸರೆ ಕೊಡಲು ಕಂದಾಯ ಗ್ರಾಮಗಳ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

2016-17 ನಲ್ಲಿ ಕಂದಾಯ ಗ್ರಾಮ ಯೋಜನೆ ಜಾರಿಗೆ ತಂದಿದ್ದೇವೆ. ಐದು ವರ್ಷದಲ್ಲಿ 1 ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಇದನ್ನು ಆದ್ಯತೆ ಕಾರ್ಯಕ್ರಮವಾಗಿ ಮಾಡಲು 94 ಡಿ ಕೆಳಗಡೆ ಹಕ್ಕು ಪತ್ರ ನೀಡಲು ಯೋಜಿಸಲಾಗಿದೆ. ಈವರೆಗೆ 3,616 ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು. ಇನ್ನು ಮೇ 20ರೊಳಗೆ 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುವುದು. ವರ್ಷದ ಅಂತ್ಯಕ್ಕೆ ಎರಡು ಲಕ್ಷ ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೃಪೆ: ವಿಜಯ ಕರ್ನಾಟಕ

news-details