ರಕ್ತ ಸಿಕ್ತ ಕಾರಿನಲ್ಲಿದ್ದ ವ್ಯಕ್ತಿಯ ಮೃತ ದೇಹ ಪತ್ತೆ
ನಾಪತ್ತೆ ಯಾಗಿರುವ ಸಂಪತ್ ಗಾಗಿ ತೀವ್ರ ಕಾರ್ಯಾಚರಣೆ
ಕೊಡಗು ಮತ್ತು ಹಾಸನ ಪೊಲೀಸರ ಹುಡುಕಾಟ – ಕೊನೆಗೂ ಮೃತ ದೇಹ ಪತ್ತೆ
ಸಕಲೇಶಪುರ ತಾಲ್ಲೂಕು ಯಸಳೂರು
ಹೋಬಳಿ ಮಾಗೇರಿಯ ಸಮೀಪ ಕಲ್ಲಹಳ್ಳಿ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ರಕ್ತ ಸಿಕ್ತ ವಾದ ಕಾರು ನಿಲ್ಲಿಸಿ ಮತ್ತೊಂದು ಕಾರಿನಲ್ಲಿ ಶನಿವಾರ ಬೆಳಗಿನ ಜಾವ ಪರಾರಿ ಯಾದ ಘಟನೆ ಅಂತ್ಯ ಕಂಡಿದೆ. ಅವರ ಮೃತ ದೇಹ ಪತ್ತೆ ಆಗಿದೆ.
ಈ ಗ್ರಾಮಕ್ಕೆ ತೋಟದ ಕೆಲಸಕ್ಕೆ ಜನ ಕರೆತಂದ ಕಾರಿನ ಚಾಲಕ ಅಪರಿಚಿತ ಕಾರನ್ನು ರಕ್ತಾ ಸಿಕ್ತ ಆಗಿರುವ ಮಾಹಿತಿ ಯನ್ನು ಗ್ರಾಮಸ್ತ ರಿಗೆ ತಿಳಿಸಿದ್ದರು ನಂತರ ಯಸಳೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ
ಇದಕ್ಕೆ ಸಂಬಂಧಪಟ್ಟಂತೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಯಸಲೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಸ್ಥಳ ಪರೀಶೀಲನೆ ನಡೆಸಿದ್ದಾರೆ ಇದಕ್ಕೆ ತನಿಖೆ ಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಬಂದು ಮಹಜರ್ ಮಾಡಿ ತನಿಖೆ ಚುರುಕು ಗೊಳಿಸಿದ್ದಾರೆ .
ಘಟನೆಯ ತನಿಖೆ ಮುಂದುವರಿದಂತೆ
ಈ ಕಾರು ಕೊಡಗಿನ ಕುಶಾಲನಗರದ ಉದ್ಯಮಿಯಾದ ಜಾನ್ ರವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.
ಜಾನ್ ರವರ ಹತ್ತಿರ ಕುಶಾಲನಗರದಲ್ಲಿ ವಾಸವಿರುವ
ಸೋಮವಾರಪೇಟೆ ತಾಲ್ಲೂಕು ಕಕ್ಕೆ ಹೊಳೆ ಜಂಗ್ಸನ್ ನಿವಾಸಿ ಯಾದ ಸಂಪತ್ (ಶಂಭು) ರವರು ಶನಿವಾರ ತೆಗೆದು ಕೊಂಡು ಬಂದಿರುತ್ತಾರೆ ಎಂದು ತಿಳಿದು ಬಂದಿದೆ.
ಆದರೆ ಇಲ್ಲಿಯ ತನಕ ಸಂಪತ್ ಮೊಬೈಲ್ ಸ್ವಿಚ್ ಆಫ್ ಅಗಿದ್ದು ಯಾವುದೇ ಮಾಹಿತಿ ಲಭ್ಯ ವಾಗಿರಲಿಲ್ಲ
ಮೊಬೈಲ್ ಗಳಲ್ಲಿ ಬಂದಿರುವ ಕೊನೆಯ ಕರೆಗಳ ಮಾಹಿತಿಗಳನ್ನು ಕಲೆ ಹಾಕಲಾಗಿತ್ತು. ಜೊತೆಗೆ ಈ ಹಿಂದೆ ನಡೆದ ಗಲಾಟೆ ಘರ್ಷಣೆ ಯ ಎದುರಾಳಿಗಳನ್ನು ಪೊಲೀಸರು ವಿಚಾರಣೆ ನಡೆಸಿದರು.
ಇದರಲ್ಲಿ ಕೆಲವು ಜನರೂ ಊರು ಬಿಟ್ಟಿದ್ದು ಇನ್ನೂ ಕೆಲವರು ವಿಚಾರಣೆಗೆ ಸಹಕರಿಸಿದ್ದಾರೆ.
ಇನ್ನು ಕೆಲವರು ಪೋಲಿಸ್ ಕರೆಗಳನ್ನು ಉತ್ತರಿಸಿ ಫೋನ್ ಸ್ವಿಚ್ ಆಫ್ ಮಾಡಿ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು.
ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಯಸಳುರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿವರ್ಗ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ಪ್ರದೇಶದ ಸುತ್ತ ಮುತ್ತ ಹುಡುಕಾಟ ನಡೆಸಿದ ಬಳಿಕ ಮೃತ ದೇಹ ಪತ್ತೆ ಆಗಿದೆ.
ಮಾಗೇರಿ ಗ್ರಾಮ ಅರಣ್ಯ ಪ್ರದೇಶಕ್ಕೇ ಹೊಂದಿಕೊಂಡಂತೆ ಇದೆ. ಅವರ ತೋಟ ಗದ್ದೆ ಗಳ ನಡುವೆ ಮನೆ ಕಟ್ಟಿ ಕೊಂಡು ವಾಸ ವಾಗಿದ್ದಾರೆ.ಪ್ರವಾಸಿ ತಾಣಗಳು ಇರುವುದರಿಂದ ಹಲವು ಹೋಮ್ ಸ್ಟೆ ಗಳು ತಲೆ ಎತ್ತಿವೆ ಅಪರಿಚಿತ ಜನರು ಬರುವುದರಿಂದ ಈ ರೀತಿಯ ಘಟನೆಗಳು ಹೆಚ್ಚೂ ಆಗುತ್ತಿರುವುದರಿಂದ
ಗ್ರಾಮಸ್ಥರು ಭಯದ ವಾತಾವರಣ ದಲ್ಲಿ ಬದುಕಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನೆಟ್ ಸಮಸ್ಯೆ ಇರುವುದರಿಂದ ಈ ಭಾಗದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಸಂಭವಿಸಿದರೆ
ಎಮರ್ಜೆನ್ಸಿ ಟೂಲ್ ನಂಬರ್ ಗೆ ಕೂಡ ಕಾಲ್ ಮಾಡಲು ಸಾಧ್ಯ ವಾಗುವುದಿಲ್ಲ
ದಯವಿಟ್ಟು ಇಲ್ಲಿ ಇರುವ ಬಿಎಸ್ಎನ್ಎಲ್ ನೆಟ್ವರ್ಕ್ ಓಪನ್ ಮಾಡಿ ಜನರ ಅನುಕೂಲಕ್ಕೆ ಅನುವು ಮಾಡಿ ಕೊಡಿ .ಅಧಿಕಾರಿಗಳು ಈಗಾಗಲೆ ನೆಟ್ವರ್ಕ್ ಓಪನ್ ಆಗಿದೆ ಎಂದು ಹೇಳುತ್ತಾರೆ ಆದರೆ ಇಲ್ಲಿಯ ಯಾವುದೇ ಜನರಿಗೂ ನೆಟ್ ವರ್ಕ್ ಸಿಗುತ್ತಿಲ್ಲ ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು
ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು
ಜನರು ಮನವಿ ಮಾಡಿದ್ದಾರೆ.
ಜೊತೆಗೆ ಕೂಡಲೇ ಈ ಭಾಗದಲ್ಲಿ ಇರುವ ಹೋಮ್ ಸ್ಟೆ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಸಿಸಿ ಕ್ಯಾಮೆರಾ ಗಳ ಅಳವಡಿಕೆ ಕಡ್ಡಾಯ ಪಡಿಸಬೇಕೆಂದು ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ
ಈ ಹಿಂದೆ ಮಾಗೇರಿ ಸಮೀಪ ಹಿಜ್ಜಿನಹಳ್ಳಿ ಗ್ರಾಮದ ಹತ್ತಿರ ಒಂದೂ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು ಆದರೆ ಇಲ್ಲಿಯ ವರೆಗೆ ಇದರ ಮಾಹಿತಿ ಇಲ್ಲ.
ಜೊತೆಗೆ ಕೂಡಲೇ ಈ ಭಾಗದಲ್ಲಿ ಇರುವ ಹೋಮ್ ಸ್ಟೆ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಸಿಸಿ ಕ್ಯಾಮೆರಾ ಗಳ ಅಳವಡಿಕೆ ಕಡ್ಡಾಯ ಪಡಿಸಬೇಕೆಂದು ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಪೋಲೀಸ್ ತನಿಖೆ ಇಂದ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.