Breaking News
   
   
   

ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಎರಡು ವರ್ಷ ಪೂರೈಸಿದ ಪೊನ್ನಣ್ಣ- ಆತ್ಮಸಾಕ್ಷಿಗೆ ವಂಚನೆಯಾಗದAತೆ ಜನಸೇವೆ ಮಾಡಿದ ತೃಪ್ತಿ-ಟಿವಿ ಒನ್ ನೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಮನದಿಂಗಿತ…….

ಕೊಡಗು

news-details

ವಿರಾಜಪೇಟೆ  ಆತ್ಮಸಾಕ್ಷಿಗೆ ವಂಚನೆಯಾಗದAತೆ ಜನಸೇವೆ ಮಾಡಿದ ತೃಪ್ತಿ ಇದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ  ಶಾಸಕರಾದ ಎ.ಎಸ್.ಪೊನ್ನಣ್ಣ ಮನದಿಂಗಿತ ವ್ಯಕ್ತಪಡಿಸಿದ್ದಾರೆ. ಎ.ಎಸ್.ಪೊನ್ನಣ್ಣ ಅವರು ಶಾಸಕರಾಗಿ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿರಾಜಪೇಟೆಯ  ಶಾಸಕರ ಗೃಹ ಕಚೇರಿಯಲ್ಲಿ ಟಿವಿ ಒನ್‌ನೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ನೀರು, ವಿದ್ಯುತ್, ಮಾನವ-ವನ್ಯಜೀವಿ ಸಂಘರ್ಷ, ಆರೋಗ್ಯ ಹೀಗೆ ವಿವಿಧ ಕ್ಷೇತ್ರಗಳ ಅಭಿವೃದ್ದಿ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ವಿರಾಜಪೇಟೆ ಕ್ಷೇತ್ರದ ಅಭಿವೃದ್ದಿಗೆ ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು  ಮಾಡಿದ ಘೋಷಣೆ ಬಹುಶ ಈ ಹಿಂದೆ ಯಾವತ್ತು ದೊರೆತ್ತಿಲ್ಲವೆಂದು ದೃಢವಾಗಿ ನುಡಿದರು.  ಬೇರೆಯವರ ದೂಷಣೆ ಮಾಡಿ, ಅವರ ವಿರುದ್ದ ಆರೋಪ ಮಾಡಿ ರಾಜಕಾರಣ ಮಾಡಿಲ್ಲ. ಹಳೆಯದರ ಬಗ್ಗೆ ವಿಶ್ಲೇಷಣೆ ಮಾಡೋಲ್ಲ ಎಂದು ಮಾರ್ಮಿಕವಾಗಿ ನುಡಿದ ಶಾಸಕ ಎ.ಎಸ್.ಪೊನ್ನಣ್ಣ, ಮೇ 13 ರಂದು ಶಾಸಕರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2023ರಿಂದ ನಡೆದ ಅಭಿವೃದ್ದಿ ಕಾರ್ಯ, ಯೋಜನೆಗಳು, ಬಂದAತಹ ಅನುದಾನದ ಬಗ್ಗೆ ಜನರ ಮುಂದಿಡುವುದು ನಮ್ಮ ಕರ್ತವ್ಯವಾಗಿದೆ. ಆದರೆ ದೇಶದ ಈಗಿನ ಪರಿಸ್ಥಿತಿಯಲ್ಲಿ ಇದು ಸೂಕ್ತವಲ್ಲ. ದೇಶದಲ್ಲಿ ಶಾಂತಿ ನೆಲೆಸಿದ ಮೇಲೆ  ಅಭಿವೃದ್ದಿ ಕಾರ್ಯಗಳನ್ನು ಜನರ ಮುಂದಿಡಲಾಗುವುದು ಎಂದರು
ಟಿವಿ ಒನ್ ನ್ಯೂಸ್, ಮಡಿಕೇರಿ 

 

news-details