ನಾಪೋಕ್ಲು ಬಳಿಯ ಕಡಿಯತ್ತೂರಿನ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ - ಯುವಕನ ಮೃತ ದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯಾಚರಣೆ
ಅಯ್ಯಪ್ಪ ಎಂಬ ಯುವಕನ ಮೃತ ದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೂರುಳಿ ಕಡಿಯತ್ತೂರು ಬಳಿಯ ದೋಣಿ ಕಡವು ಎಂಬಲ್ಲಿ ನೆನ್ನೆ ನಡೆದ ದುರ್ಘಟನೆ.
ಸ್ನಾನಕ್ಕೆ ತೆರಳಿದ್ದ ಯುವಕರ ತಂಡ ದೋಣಿಯಲ್ಲಿ ಸಾಗುವ ಸಂದರ್ಭ ದೋಣಿ ಮಗುಚಿದ ಪರಿಣಾಮ ಈಜು ಬಾರದೆ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ನೆನ್ನೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಗಿರೀಶ್ (16) ಎಂಬ ಯುವಕನ ಮೃತ ದೇಹವನ್ನು ನದಿ ನೀರಿನಿಂದ ಹೊರ ತೆಗೆಯಲಾಗಿತ್ತು.
ಮತ್ತೊಬ್ಬ ಯುವಕ ಅಯ್ಯಪ್ಪ(18 )ಎಂಬವನ ಮೃತದೆಹಕ್ಕಾಗಿ ನಡೆದ ಶೋಧಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಉಂಟಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಮುಂದೂಡಲಾಗಿತ್ತು.
ಇಂದು ಬೆಳಗ್ಗಿನಿಂದಲೇ ನಾಪೋಕ್ಲು ಪೊಲೀಸರು ಅಗ್ನಿಶಾಮಕದಳ ಹಾಗೂ ಸ್ಥಳೀಯರು ಅಯ್ಯಪ್ಪ ಎಂಬ ಯುವಕನ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.