Breaking News
   
   
   

ನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಎಲಿಫೆಂಟ್ ಡಂಗ್ ಡೆಸರ್ಟ್, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ದೇಶ

news-details

ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಎಲಿಫೆಂಟ್ ಡಂಗ್ ಡೆಸರ್ಟ್, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಚೀನಾ: ಈ ಜಗತ್ತಿನಲ್ಲಿ ಕೆಲವು ವಿಚಿತ್ರ ಜನರಿದ್ದಾರೆ. ಅವರ ಜೀವನಶೈಲಿ ಹಾಗೂ ಸೇವಿಸುವ ಆಹಾರವು ತುಂಬಾನೇ ವಿಚಿತ್ರವಾಗಿರುತ್ತದೆ. ಅದರಲ್ಲಿಯೂ ಈ ಜಗತ್ತಿನಲ್ಲಿರುವ ಕೆಲವರ ಆಹಾರ ಪದ್ಧತಿ ನೋಡಿದಾಗ ಹೀಗೂ ಉಂಟಾ ಎಂದೆನಿಸುತ್ತದೆ. ಕೆಲವರ ಆಹಾರವೇ ಹುಳ ಹುಪ್ಪಟೆ, ಚೇಳು, ಹಾವುಗಳನ್ನು ಆಗಿರುತ್ತದೆ. ನಮಗೆಲ್ಲರಿಗೂ ಈ ರೀತಿಯ ಆಹಾರ ಕ್ರಮವು ಅಸಹ್ಯವೆನಿಸಿದರೂ ಅವರು ಬದುಕುವ ರೀತಿಯೇ ಹಾಗೆ ಇರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚೀನಾ ವಿಭಿನ್ನವಾದ ಸ್ವೀಟ್ ರೆಸಿಪಿಯನ್ನು ನೋಡಬಹುದು. ಹೌದು, ಚೀನಾದ ಶಾಂಘೈ ನ ರೆಸ್ಟೋರೆಂಟ್ ನಲ್ಲಿ  ಆನೆಯ ಲದ್ದಿ ಯಿಂದ ಸ್ವೀಟ್ ಮಾಡಲಾಗುತ್ತದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. Share Chinese Douyin ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಹೌದು, ವಿಡಿಯೋದೊಂದಿಗೆ ಶಾಂಘೈನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಆನೆಯ ಸಗಣಿಯಿಂದ ಮಾಡಿದ ಭಕ್ಷ್ಯಗಳಿಗೆ ಪ್ರತಿ ವ್ಯಕ್ತಿಗೆ ನಾಲ್ಕು ಸಾವಿರ ಯುವಾನ್ ಶುಲ್ಕ ವಿಧಿಸುತ್ತಿರುವುದು ಅಧಿಕೃತ ತನಿಖೆಗೆ ಒಳಪಟ್ಟಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ.

news-details