ತೋಟದ ಒಂಟಿ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ಮೂಲತಃ ಕೇರಳ ರಾಜ್ಯದ ಕಣ್ಣನೂರಿನ ಭಾಸ್ಕರನ್ ಕೋಲಿ ಅವರ ಪುತ್ರ ೪೯ ವರ್ಷ ಪ್ರಾಯದ ಪ್ರದೀಪ್ ಕೋಲಿ ಮೃತ ವ್ಯಕ್ತಿಯಾಗಿದ್ದಾರೆ. ಕೊಂಗಣ ಗ್ರಾಮದಲ್ಲಿ ಕಾಫಿತೋಟ ಹೊಂದಿರುವ ಪ್ರದೀಪ್ ಅವರು, ಹಲವು ವರ್ಷಗಳಿಂದ ವಾಸವಿದ್ದು, ತೋಟದ ಮದ್ಯೆ ಮನೆ ಇರುವುದರಿಂದ ಜನರ ಓಡಾಟ ಅಷ್ಟಾಗಿ ಇರಲಿಲ್ಲವೆನ್ನಲಾಗಿದೆ. ಬುಧವಾರ ಸಂಜೆ ಸಿಬ್ಬಂದಿ ಬಂದು ನೋಡಿದಾರ ಮನೆಗೆ ಬೀಗ ಹಾಕಿತ್ತೆನ್ನಲಾಗಿದ್ದು, ಜೊತೆಗಿದ್ದ ಕೀಯಿಂದ ಮನೆ ಬಾಗಿಲು ತೆಗೆದ ಸಂದರ್ಭ ಪ್ರದೀಪ್ ಕುಸಿದುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಕುತ್ತಿಗೆಯಲ್ಲಿ ಬಿಗಿಯಾಗಿ ಕಟ್ಟಿದ್ದ ಹಗ್ಗ ಇರುವುದು ಕಂಡುಬAದಿದೆ. ತಕ್ಷಣ ಸಿಬ್ಬಂದಿ ಗೋಣಿಕೊಪ್ಪಲು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಬೆರಳಚ್ಚು ತಂಡ ಹಾಗೂ ಶ್ವಾನದಳ ಆಗಮಿಸಿ. ಪರಿಶೀಲನೆ ನಡೆಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಎಸ್.ಪಿ., ಕೆ.ರಾಮರಾಜನ್ ಅವರು,, ಘಟನೆ ಕುರಿತು ಮಾಹಿತಿ ನೀಡಿದರು. ಬುಧವಾರ ಮಧ್ಯಾಹ್ನ ಘಟನೆ ನಡೆದಿರಬಹುದೆಂದು ಹೇಳಿದರಲ್ಲದೇ, ಮನೆಯಲ್ಲಿದ್ದ ಸಿಸಿ ಕ್ಯಾಮೇರಾ ದೃಶ್ಯಗಳನ್ನು ನಾಶಪಡಿಸಲು ಪ್ರಯತ್ನಿಸಲಾಗಿದ್ದು, ಕೆಲವು ಸಿಸಿ ಕ್ಯಾಮೇರಾ ದೃಶ್ಯಾವಳಿಗಳು ದೊರೆತ್ತಿದ್ದು, ಇದನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುವುದೆಂದರು.
ಬೈಟ್-
ಈ ಸಂದರ್ಭ ಅಡಿಷನಲ್ ಎಸ್‌ಪಿ, ಬಾರಿಕೆ ದಿನೇಶ್, ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ, ಠಾಣಾಧಿಕಾರಿ ಪ್ರದೀಪ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಗುರುವಾರ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.