Breaking News
   
   
   

ಹಾತೂರು ಬಳಿ ಬೀಕರ ರಸ್ತೆ ಅಪಘಾತ ತಾಯಿ-ಮಗ ಸ್ಥಳದಲ್ಲೇ ಸಾವು

ಕೊಡಗು

news-details

ಹಾತೂರು       
===================      
ಲಾರಿ ಹಾಗೂ ಮಾರುತಿ ಓಮ್ನಿ ನಡುವೆ ಸಂಭವಿಸಿದ ಅಪಘಾತದಲ್ಲಿ  ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ  ಘಟನೆ ಗೋಣಿಕೊಪ್ಪಲು ಬಳಿಯ  ಹಾತೂರು ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಗೇರಿ ಗ್ರಾಮದ ಅರ್ಚಕ ದಿವಂಗತ ಪುಂಡರಿಕಾಕ್ಷ ಅವರ ಪತ್ನಿ ೭೦ ವರ್ಷದ ಲಲಿತ ಹಾಗೂ ಅವರ ಪುತ್ರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ೪೨ ವರ್ಷ ಪ್ರಾಯದ ಸುದರ್ಶನ್ ಮೃತ ದುರ್ದೈವಿಗಳು. ಮೈಸೂರಿನತ್ತ ಹೋಗುತ್ತಿದ್ದ ತರಕಾರಿ ಲಾರಿ ಮತ್ತು ಗೋಣಿಕೊಪ್ಪಲಿನಿಂದ ಬಿ.ಶೆಟ್ಟಿಗೇರಿಯತ್ತ ಮಾರುತಿ ಓಮ್ನಿ ವಾಹನ ಬರುತ್ತಿದ್ದ ಸಂದರ್ಭ ಹಾತೂರು ಬಳಿ ಅಪಘಾತ ಸಂಭವಿಸಿದೆ.  ಅಪಘಾತದ ತೀವ್ರತೆಗೆ ಮಾರುತಿ ಓಮ್ನಿ ವಾಹನ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಿವಿ ಒನ್ ನ್ಯೂಸ್, ಮಡಿಕೇರಿ 

 

news-details