ಮಡಿಕೇರಿ: ಖ್ಯಾತ ಬ್ಯಾಡ್ಮಿಂಟರ್ ತಾರೆ (Badminton Player) ಪಿ.ವಿ.ಸಿಂಧು (PV Sindhu) ಇತ್ತೀಚೆಗೆ ಕರ್ನಾಹೌದು, ಇಂಥ ಆಸೆಗೆ ಕಾರಣವಾದದ್ದು ಇತ್ತೀಚಿಗೆ ಕೊಡಗಿಗೆ ಭೇಟಿ ನೀಡಿ ಇಲ್ಲಿನ ಕಾಫಿ ತೋಟದ ನಡುವೆ ಕೆಲವು ದಿನಗಳು ಕಾಲಕಳೆದ ನಂತರವಂತೆ. ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿಂದ (Telangana) ಕೊಡಗಿಗೆ ಪತಿ ಹಾಗೂ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಅಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದರುಟಕದ ಕಾಶ್ಮೀರ ಎಂದೇ ಕರೆಯುವ ಕೊಡಗಿಗೆ (Kodagu) ಭೇಟಿ ನೀಡಿದ್ದರು. ಈ ಬಳಿಕ ನನಗೆ ಕಾಫಿ ತೋಟ ಖರೀದಿಸುವ ಆಸೆ ಇದೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.ಈ ಬಗ್ಗೆ ಎಕ್ಸ್‌ನಲ್ಲಿ ಸಂತೋಷ ಹಂಚಿಕೊಂಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ಕಾಫಿ ಸಿಪ್ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. 14 ವನ್ಯಜೀವಿಗಳು, 800 ತಳಿಯ ಪಕ್ಷಿಗಳನ್ನೂ, ವಿವಿಧ ಜಾತಿಯ ಪುಷ್ಪ, ಸಸ್ಯಗಳು ಈ ತೋಟದಲ್ಲಿವೆ. ನನ್ನ ಪತಿ ದತ್ತ ಕೂಡಾ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಧು, ಬ್ಯಾಡ್ಮಿಂಟನ್‌ನಲ್ಲಿ ವರ್ಲ್ಡ್ ರ‍್ಯಾಂಕಿಂಗ್ 2 ಸ್ಥಾನದಲ್ಲಿದ್ದಾರೆ. ಹೆಸರಾಂತ ಉದ್ಯಮಿ ವೆಂಕಟದತ್ತ ಸಾಯಿ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿರುವ ಸಿಂಧು, ವಿಶ್ರಾಂತಿ ಬಯಸಿ ಪತಿಯೊಂದಿಗೆ ಕೊಡಗಿಗೆ ಬಂದಿದ್ದರು.