ಕೇರಳ ರಾಜ್ಯದಿಂದ ಅಕ್ರಮವಾಗಿ ಅಂಬರ್ ಗ್ರೀಸ್ ಅನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಹತ್ತು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಸುಮಾರು 10 ಕೋಟಿ ರೂಪಾಯಿಗಳ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್ ಗ್ರೀಸ್ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ತಿರುವನಂತಪುರAನಿAದ ಅಕ್ರಮವಾಗಿ ಅಂಬರ್ ಗ್ರೀಸ್ ಅನ್ನು ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್.ಹೆಚ್.ಎಸ್. ಹಾಗೂ ಸಿಬ್ಬಂದಿಗಳ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಅದರಂತೆ ಏಪ್ರಿಲ್ 10 ರಂದು ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆ.ಜಿ 390 ಗ್ರಾಮ್ ಅಂಬರ್ ಗ್ರೀಸ್ ಸಹಿತ ಕೇರಳದ ತಿರುವನಂತಪುರA ಜಿಲ್ಲೆಯ. ಶಂಶುದ್ದೀನ್.ಎಸ್. ಎಂ.ನವಾಜ್, ಕಣ್ಣೂರು ಜಿಲ್ಲೆಯ ವಿ.ಕೆ.ಲತೀಶ್, ರಿಜೇಶ್.ವಿ, ಪ್ರಶಾಂತ್.ಟಿ, ಭದ್ರಾವತಿಯ ರಾಘವೇಂದ್ರ,ಎ.ವಿ, ಕಾಸರಗೋಡು ಜಿಲ್ಲೆಯ ಬಾಲಚಂದ್ರನಾಯಕ್, ಕೇರಳದ ಕ್ಯಾಲಿಕಟ್‌ನ ಸಾಜುಥಾಮೋಸ್, ಕಣ್ಣೂರು ಜಿಲ್ಲೆಯ ಜೋಬಿಸ್.ಕೆ.ಕೆ., ಜಿಜೇಸ್.ಎಂ. ಎಂ ಹತ್ತು ಆರೋಪಿಗಳನ್ನು ಬಂಧಿಸಿ, 10 ಕೋಟಿ ಮೌಲ್ಯ ಅಂಬರ ಗ್ರೀಸ್ ಸಹಿತ, ಮಾರುತಿ ಸ್ವೀಫ್ಟ್ ಕಾರು, ನೋಟು ಎಣಿಸುವ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು