Breaking News
   
   
   

ದೇವರಕೊಲ್ಲಿ ಬಳಿ ಅಪಘಾತಕ್ಕೀಡಾದ ಕಾರಿನಲ್ಲಿತ್ತು ಗಾಂಜಾ…>! ಕಾರಿನಲ್ಲಿದ್ದ ಮೂವರು ಆರೋಪಿಗಳ ಬಂಧನ……

ಕೊಡಗು

news-details

ಅಪಘಾತಕ್ಕೀಡಾದ ಕಾರಿನಲ್ಲಿದ್ದ ಯುವಕರನ್ನು ರಕ್ಷಿಸಿದ ಸಂದರ್ಭ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವರಕೊಲ್ಲಿ ಬಳಿ ನಡೆದಿದೆ.  ಶನಿವಾರ ಸಂಜೆ ವೇಳೆ ಕೇರಳ ನೋಂದಣಿ ಹೊಂದಿದ್ದ ಕಾರೊಂದು ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ವೇಳೆ ಸ್ಥಳೀಯರು ನೆರವಿಗೆ ಧಾವಿಸಿದ ಸಂದರ್ಭ ಕಾರಿನಲ್ಲಿ ಗಾಂಜಾ ಪ್ಯಾಕೆಟ್‌ಗಳು ಕಂಡುಬAದಿದ್ದು, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ತೆರಳಿದ ಪೊಲೀಸರು ಕಾರಿನಲ್ಲಿದ್ದ ಪುತ್ತೂರು ಮೂಲದ   ಫಾರುಕ್, ಸಿ ಮೊಹಮದ್ ಮುಸ್ತಾಫ,  ಜಾಬೀರ್,  ಎಂಬವರನ್ನು ಬಂಧಿಸಿ, ಗಾಂಜಾ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

news-details