ಮಡಿಕೇರಿಯ ಹೃದಯ ಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ತಡರಾತ್ರಿ ೨ ಗಂಟೆ ಸುಮಾರಿಗೆ ಕಿಡಿಗೇಡಿಯೋರ್ವ ನುಗ್ಗಿದ್ದು, ಕಟ್ಟಡದ ಪಕ್ಕದಲ್ಲಿರುವ ಟೆಲಿ ಪೋನ್ ಕಂಬದ ಮುಖಾಂತರ ಸರಾಗವಾಗಿ ಹಾಸ್ಟೆಲ್ ಗೇಟ್ ಒಳಗೆ ಹತ್ತಿ ಬಂದಿದ್ದಾನೆ. ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಠಡಿಗಳ ಒಳಗೆ ಇಣುಕಿ ನೋಡಿದ ವ್ಯಕ್ತಿ ವಿದ್ಯಾರ್ಥಿನಿಯರ ಬಟ್ಟೆ., ಬ್ಯಾಗ್.ಹಾಗೂ ಅಲ್ಪ ಮೊತ್ತದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಮಕ್ಕಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು . ಸೆಕ್ಯುರಿಟಿ ಮತ್ತು ವಾರ್ಡನ್ ಗಳಿಗೆ ಇನ್ನೊಂದು ಬಾರಿ ಟ್ರೈನಿಂಗ್ ನೀಡಲಾಗುವುದು. ಘಟನೆಗೆ ಸಂಬAಧಿಸಿದAತೆ ನಿರ್ಲಕ್ಷ್ಯ ಮಾಡಿದ ಅಧಿಕಾರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹೇಳಿದ್ದಾರೆ