Breaking News
   
   
   

ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ- ಗಮನ ಸೆಳೆದ ವಿವಿಧ ತಳಿಯ ಶ್ವಾನಗಳು……

ಕೊಡಗು

news-details

ಮಡಿಕೇರಿಯಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಶ್ವಾನ ಪ್ರದರ್ಶನ ಮೆರುಗು ನೀಡಿತು. ವಿವಿಧ ತಳಿಯ ಶ್ವಾನಗಳು ಹಾಕಿ ಮೈದಾನದಲ್ಲಿ ಆಕರ್ಷಣೆ ಮತ್ತು ಚಾಕಚಕ್ಯತೆಯಿಂದ ನೋಡುಗರ ಗಮನ ಸೆಳೆದವು. ಶ್ವಾನ ಪ್ರದರ್ಶನದಲ್ಲಿ ರಾಟ್ ವಿಲ್ಲರ್, ಗ್ರೇಟ್‌ಡೇನ್, ಮ್ಯಾಸ್ಟಿಫ್, ಸೈಬೀರಿಯನ್ ಹಸ್ಕಿ, ಪಗ್, ಬುಲ್‌ಡಾಗ್, ಗೋಲ್ಡನ್ ರೆಟ್ರೀವರ್, ಬೀಗಲ್, ಲ್ಯಾಬ್ರಡರ್, ಜರ್ಮನ್ ಶಫರ್ಡ್, ಮುಧೋಳ್ ಹೌಂಡ್ ಸೇರಿದಂತೆ ೧೭ ವಿವಿಧ ತಳಿಯ ಅಧಿಕ ಸಂಖ್ಯೆಯ ಶ್ವಾನಗಳು ಆಕರ್ಷಿಸಿದವು.  ಎಲ್ಲಾ ಶ್ವಾನಗಳಿಗೆ ಜಿಲ್ಲಾ ಪಶುವೈದ್ಯಕೀಯ ಇಲಾಖೆಯಿಂದ ಉಚಿತ ರೇಬಿಸ್ ಲಸಿಕೆ ಹಾಗೂ ಔಷಧಿ, ಪಾಲಿಕ್ಲಿನಿಕ್‌ನಿಂದ ಜಂತು ನಾಶಕ ಲಸಿಕೆ ಹಾಕಲಾಯಿತು. ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ನಡೆದ ಶ್ವಾನ ಪ್ರದರ್ಶನವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಉದ್ಘಾಟಿಸಿದರು. ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಲಿಂಗರಾಜು ಹಾ.ದೊಡ್ಡಮನಿ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಪಾಲಿಕ್ಲಿನಿಕ್ ಜಿಲ್ಲಾ ಉಪನಿರ್ದೇಶಕ ಕ್ಯಾಪ್ಟನ್ ಡಾ.ಸಿ.ಪಿ.ತಿಮ್ಮಯ್ಯ,  ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ನಿವೃತ್ತ ಉಪನಿರ್ದೇಶಕ ಡಾ.ಕೆ.ಪಿ.ಅಯ್ಯಪ್ಪ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಉಪಾಧ್ಯಕ್ಷ ಡೀನ್ ಬೋಪಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

news-details