ಆರ್‌ಬಿಐ ಡೆಪ್ಯೂಟಿ ಗವರ್ನರ್ ಆಗಿ ಆರ್ಥಿಕ ತಜ್ಞೆ ಪೂನಂ ಗುಪ್ತಾ ನೇಮಕ -
ನವದೆಹಲಿ: ಕೇಂದ್ರ ಸರ್ಕಾರ, ಆರ್ಥಿಕ ನೀತಿ ಸಂಶೋಧನಾ ಮಂಡಳಿಯ (ಎನ್‌ಸಿಎಇಆರ್) ಪ್ರಧಾನ ನಿರ್ದೇಶಕರಾಗಿದ್ದ ಪೂನಮ್ ಗುಪ್ತಾ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ಉಪ ಗವರ್ನರ್ ಆಗಿ, 3 ವರ್ಷಗಳ ಅವಧಿಗೆ ನೇಮಕ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಜನವರಿಯಲ್ಲಿ ಎಂ.ಡಿ. ಪಾತ್ರಾ ನಿರ್ಗಮನದ ನಂತರ ಈ ಹುದ್ದೆ ಭರ್ತಿಯಾಗಿರಲಿಲ್ಲ. ಇದಕ್ಕೂ ಪೂರ್ವದಲ್ಲಿ ಪೂನಮ್ ಗುಪ್ತಾ ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, 16ನೇ ಹಣಕಾಸು ಆಯೋಗದ ಸಲಹಾ ಮಂಡಳಿ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.