Breaking News
   
   
   

ಮಡಿಕೇರಿಯ ರಾಜಾಸೀಟ್ ರಸ್ತೆಯ ತಡೆಗೋಡೆಯಲ್ಲಿ ಅರಳಿದ ಅತ್ಯಾಕರ್ಷಕ ಚಿತ್ರಗಳು….!

ಕೊಡಗು

news-details

ಮಡಿಕೇರಿಯ ರಾಜಾಸೀಟ್ ರಸ್ತೆಯಲ್ಲಿರುವ ಎಸ್.ಪಿ.ಬಂಗಲೆ ಪಕ್ಕದಲ್ಲಿನ ತಡೆಗೋಡೆಯತ್ತ ನೀವು ಗಮನ ಹರಿಸಿದರೆ  ಅತ್ಯಾಕರ್ಷಕ ಚಿತ್ರಗಳನ್ನು ನೋಡುತ್ತೀರಿ. ಬಿಕೋ ಎನ್ನುತ್ತಿದ್ದ ಗೋಡೆಗಳೀಗ ಅಪೂರ್ವ ಚಿತ್ರಕಲೆಗಳೊಂದಿಗೆ ಕಂಗೊಳಿಸುತ್ತಾ ಗಮನ ಸೆಳೆಯುತ್ತಿದೆ. ಈ ಚಿತ್ರಗಳು ಕೇವಲ ಬಣ್ಣಗಳಿಂದ ರೂಪುಗೊಂಡಿದ್ದಾಗಿರದೇ, ಪ್ರತಿಯೊಂದು ಚಿತ್ರಗಳು ಜನರಿಗೆ ಮಹತ್ವದ ಸಂದೇಶ ಸಾರುವಂತಿದೆ. ಈ ಚಿತ್ರಕಲೆಯನ್ನು ಮಡಿಕೇರಿ ಮೂಲದ ಮೈಂಡ್ ಅಂಡ್ ಮ್ಯಾಟರ್ಸ್ ಸಂಸ್ಥೆಯ ಮಚ್ಚಾರಂಡ  ದೀಪಿಕಾ ಅಪ್ಪಯ್ಯ ನೇತೃತ್ವದಲ್ಲಿ 5 ಕಲಾವಿದರು ರೂಪಿಸಿದ್ದಾರೆ.   ಮಡಿಕೇರಿ ಮೂಲದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರ ಮೈಂಡ್ ಅಂಡ್ ಮ್ಯಾರ‍್ಸ್  ಸಂಸ್ಥೆಯು ಇದೀಗ ಈ ತಡೆಗೋಡೆಯಲ್ಲಿ ಕೊಡಗಿನ ನಿಸರ್ಗ, ಕ್ರೀಡೆಯ ಮಹತ್ವ ಸಾರುವ ಚಿತ್ರಕಲೆಯನ್ನು ಸುಂದರವಾಗಿ ಚಿತ್ರಿಸಿದ್ದು, ಇದರ ಜತೆಗೇ ಆರೋಗ್ಯ, ಸಂಚಾರದ ಮಹತ್ವ ಸಾರುವ ಸಂದೇಶದ ಕಲಾಚಿತ್ರಗಳು ಇಲ್ಲೀಗ ಜನಮನ ಸೆಳೆಯುತ್ತಿದೆ. ಕಳೆದ ವರ್ಷ ಇದೇ ತಡೆಗೋಡೆಯಲ್ಲಿ ದೀಪಿಕಾ ಪ್ರಯತ್ನದಿಂದಾಗಿ ಕೊಡಗಿನ ಕಾಫಿ ಕುಯ್ಲಿನ ಬಗ್ಗೆ ಆಕರ್ಷಕ ಚಿತ್ರಕಲೆ ರೂಪುಗೊಂಡಿತ್ತು. ಈ ವರ್ಷ  ಒಟ್ಟು 5 ಚಿತ್ರಗಳನ್ನು ಇಲ್ಲಿ ಮೈಂಡ್ ಅಂಡ್ ಮ್ಯಾರ‍್ಸ್ ಸಂಸ್ಥೆಯು ಬೆಂಗಳೂರು ಮತ್ತು ಕೊಡಗಿನ ಕಲಾವಿದರಿಂದ ರೂಪಿಸಿದೆ. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಮೂಲಕ 25 ನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭ ಕೊಡವ ಹಾಕಿಯ ಮಹತ್ವ ಸಾರುವ ಚಿತ್ರಕಲೆ ಈಗ ತಡೆಗೋಡೆಯಲ್ಲಿ ಕಲಾ ಚಿತ್ರವಾಗಿ ರೂಪುಗೊಂಡಿದೆ. ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆ ಸುರಕ್ಷತೆ  ಬಗೆಗೆ  ತಿಳಿಹೇಳುವ ಪ್ರಯತ್ನವಾಗಿ ರಸ್ತೆ ಸುರಕ್ಷತಾ ಸಂದೇಶದ ಕಲಾಚಿತ್ರ ಕೂಡ ಇಲ್ಲಿ ರೂಪುಗೊಂಡಿದೆ. ಮಾನಸಿಕ ಸಮಸ್ಯೆಗಳಿಂದ ಅನೇಕ ಜನ ಬಳಲುತ್ತಿರುವುದನ್ನು ಮನಗಂಡು ಈ ಬಗ್ಗೆ ಜಾಗ್ರತಿ ಮೂಡಿಸಲು ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಬಗ್ಗೆಗೂ ಕಲೆಯಲ್ಲಿ ಗಮನ ಸೆಳೆಯಲಾಗಿದೆ.  ಜೀವವೈವಿಧ್ಯತೆಗಳ ಬೀಡಾಗಿರುವ ಕೊಡಗಿನಲ್ಲಿ ಕಾಡು, ವನ್ಯಜೀವಿಗಳ ಮಹತ್ವ ಸಾರುವಂಥ ಚಿತ್ರಕೂಡ ಇಲ್ಲಿದೆ. ಪೂಜಾ ಆಚಾರ್ಯ, ಚೇತನ್ ಎಸ್ ಮೂರ್ತಿ, ದಿಯಾ ಹನೀಸ,  ರೂಪಶ್ರೀ ವಿಪಿನ್ ಈ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.   ಇಂಥ ಚಿತ್ರದ ಮೂಲಕ ಜನರ ಗಮನ ಸೆಳೆದು ಅವರ ಮನಸ್ಸಿನಲ್ಲಿಯೂ ಆಯಾ ವಿಚಾರದ ಬಗ್ಗೆ ಜಾಗ್ರತಿ ಮೂಡಿಸುವ ಪ್ರಯತ್ನ ನನ್ನದು ಎಂದು ದೀಪಿಕಾ ಟಿವಿ  1 ನೊಂದಿಗೆ ಹೇಳಿದರು.

news-details