ಬೆಂಗಳೂರಿನ_ಬೇಕರಿ_ಕೇಕ್‌ಗಳಲ್ಲಿ_ಕ್ಯಾನ್ಸರ್‌ಕಾರಕ_ಅಂಶ_ಪತ್ತೆ.
ಬೆಂಗಳೂರು ನಗರದ ಬೇಕರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಕೇಕ್‌ಗಳಲ್ಲಿ ಕ್ಯಾನ್ಸರ್‌ಕಾರಕ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಆಹಾರ ಗುಣಮಟ್ಟ ಇಲಾಖೆ ಬೇಕರಿ ತಿನಿಸಿಗಳ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಬೇಕರಿ ಕೇಕ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಸಂಗ್ರಹಿಸಿದ್ದ ಬೇಕರಿ ತಿನಿಸು ಮಾದರಿಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ರವಾನಿಸಿತ್ತು. ಈ ಪೈಕಿ 12 ಬೇಕರಿಗಳ ಕೇಕ್ ನಲ್ಲಿ ಮಾರಣಾಂತಿಕ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬೇಕರಿ ಕೇಕ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿರುವ ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಪತ್ತೆಯಾಗಿದೆ. 12 ಮಾದರಿಗಳಲ್ಲಿ ಅಲೂನಾ ರೆಡ್, ನನ್ ಟೆಸ್ ಯೆಲ್ಲೋ ಕೂಡ ಪತ್ತೆಯಾಗಿದೆ.
ಕೃತಕ ಬಣ್ಣ ಬಳಕೆಯಿಂದಲೇ ಕ್ಯಾನ್ಸರ್‌ಕಾರಕ ಅಂಶಗಳು ಬೇಕರಿ ಕೇಕ್‌ಗಳಲ್ಲಿ ಕಂಡುಬಂದಿದ್ದಾಗಿ ಹೇಳಲಾಗುತ್ತಿದೆ. ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳು ಗುಣಮಟ್ಟ ಕಾಪಾಡುವಂತೆ, ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ಮುಂದೆ ಬಳಕೆ ಮಾಡದಂತೆ ಎಚ್ಚರಿಕೆ ನೀಡಿವೆ ಎಂದು ತಿಳಿದುಬಂದಿದೆ.