Breaking News
   
   
   

ಬಸವನಹಳ್ಳಿ ಗ್ರಾಮದ ಬೊಳ್ಳೂರು ಎಂಬಲ್ಲಿ ಊರುಡುವೆ ಜಾಗದಿಂದ ಅಕ್ರಮ ಮಣ್ಣು ಸಾಗಾಟ- ಟಿವಿ ಒನ್ ಚಾನಲ್ ಬಯಲಿಗೆಳೆದ ಪ್ರಕರಣ- ಮೂವರ ವಿರುದ್ಧ ಎಫ್.ಐ.ಆರ್. ದಾಖಲು……

ಕೊಡಗು

news-details

ಗುಡ್ಡೆಹೊಸೂರು: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಬೊಳ್ಳೂರು ಎಂಬಲ್ಲಿರುವ ಊರುಡುವೆ ಜಾಗದಿಂದ ಅಕ್ರಮವಾಗಿ ಮಣ್ಣು ಸಾಗಾಟ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೊಳ್ಳೂರು ಗ್ರಾಮದ  ಊರುಡುವೆ ಜಾಗದಿಂದ ಸುಮಾರು 500 ಲೋಡ್‌ಗಳಷ್ಟು ಮಣ್ಣನ್ನು ಅಕ್ರಮವಾಗಿ ಖಾಸಗಿ ಜಾಗಕ್ಕೆ ಸಾಗಿಸಲಾಗಿದೆ ಎಂಬ ಸ್ಥಳೀಯರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಕ್ರಮ ಮರಳು ಸಾಗಾಟದ ಕರ್ಮಕಾಂಡವನ್ನು ಟಿವಿ ಒನ್ ಚಾನಲ್ ಬಯಲಿಗೆಳೆದಿತ್ತು. ರಿಯಲ್ ಎಸ್ಟೇಟ್ ಮಾಫಿಯಾದಿಂದ   ಕಳೆದ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಊರುಡುವೆ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಪರಿಣಾಮ ಸುಮಾರು 15 ಅಡಿಗಳಷ್ಟು ಆಳದ ಕೆರೆ ನಿರ್ಮಾಣಗೊಂಡಿದ್ದು,  ಅಲ್ಲದೇ ಕೆರೆಯ ಪಕ್ಕದಲ್ಲೇ ಬಿದಿರಿನ ಮೆಳೆಗಳು ಸಂಪೂರ್ಣ ನಾಶವಾಗಿದ್ದು,  ಊರುಡುವೆ ಜಾಗ ಬಟಾಬಯಲಿನಂತೆ ಗೋಚರಿಸುತ್ತಿದ್ದು, ಅಕ್ರಮವಾಗಿ ಮಣ್ಣನ್ನು  ತೆಗೆಯಲು ಜೆಸಿಬಿ ಯಂತ್ರವನ್ನು ಬಳಸಿದ ಪರಿಣಾಮ ಬಿದಿರಿನ ಮೆಳೆಗಳು ಸಂಪೂರ್ಣ ನಾಶವಾಗಿದೆ.  ಇಲ್ಲಿ ಖಾಸಗಿಯವರು ಊರುಡುವೆ ಜಾಗದಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಸಾಗಿಸಿದ್ದು, ಇದಕ್ಕೆ ಸರಕಾರಕ್ಕೆ ರಾಯಲ್ಟಿ ಕಟ್ಟಲಾಗಿದೆಯೇ ಇಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಆಗಸ್ಟ್ 26ರಂದು ಟಿವಿ ಒನ್ ಚಾನಲ್ ಸುದ್ದಿ ಪ್ರಸಾರ ಮಾಡುವ ಅಕ್ರಮ ಮರಳು ಸಾಗಾಟದ ಕರ್ಮಕಾಂಡವನ್ನು ಬಯಲಿಗೆಳೆದಿತ್ತು.  ಟಿವಿ ಒನ್ ಚಾನಲ್‌ನಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಸೂಚನೆ  ಮೇರೆಗೆ  ಎಸಿಎಫ್ ಗೋಪಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿದ್ದರು. ವರದಿಯ ಹಿನ್ನೆಲೆಯಲ್ಲಿ ಬೊಳ್ಳೂರು ಗ್ರಾಮದ ಸಿ.ಆರ್.ದಿನು, ಸತೀಶ್ ಹಾಗೂ ದೊಡ್ಡತ್ತೂರು ಗ್ರಾಮದ ವಾಸು ಎಂಬವರ ವಿರುದ್ದ ಕುಶಾಲನಗರ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದು ಇಲಾಖೆ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

news-details