Breaking News
   
   
   

ಪೊನ್ನಂಪೇಟೆ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ.

ಕೊಡಗು

news-details

ಪೊನ್ನಂಪೇಟೆ : ಕೊಡಗು ಜಿಲ್ಲಾಧಿಕಾರಿ ವೆಂಕಟ್‌ ರಾಜ ಅವರು ಪೊನ್ನಂಪೇಟೆ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೊಸದಾಗಿ ರಚೆನಯಾದ ಪೊನ್ನಂಪೇಟೆ ತಾಲೂಕಿನಲ್ಲಿ ಸಾರ್ವಜನಿಕರಿಗೆ  ತಾಲ್ಲೂಕು ಕಚೇರಿಯಲ್ಲಿ ಒದಗಿಸಬೇಕಾದ ಸೇವೆಗಳ ವಿಚಾರದಲ್ಲಿ ವಿಸ್ತೃತವಾದ ಚರ್ಚೆಯನ್ನು ನಡೆಸಿದರು ಮತ್ತು ಹಾಡಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಬಗೆಹರಿಸುವ  ವಿಚಾರದಲ್ಲಿ ಮಾಹಿತಿಯನ್ನು ಪಡೆದು  ಮತ್ತು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ಸಲಹೆ ನೀಡಿದರು. 

ತಾಲೂಕಿನಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಗಳ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದು ಅವುಗಳ ಪರಿಹಾರದ ವಿಚಾರದಲ್ಲಿ ಚರ್ಚಿಸಿದರು. ಪೊನ್ನಂಪೇಟೆ ಪ್ರವಾಸಿ ಮಂದಿರ ಮತ್ತು ಪೊನ್ನಂಪೇಟೆ ಹಾಕಿ ಕ್ರೀಡಾಂಗಣವನ್ನು ಪರಿಶೀಲಿಸಿದರು. ಈ ಸಂದರ್ಭ ತಾಲ್ಲೂಕು ತಹಸಿಲ್ದಾರ್ ಏನ್ ಎಸ್ ಪ್ರಶಾಂತ್  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

news-details