Breaking News
   
   
   

ಪ್ರತಾಪ್‍ ಸಿಂಹರಿಂದ ಸಂಸದರ ಅನುದಾನ ದುರ್ಬಳಕೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

ಕೊಡಗು

news-details

ಕೊಡಗು : ಸಂಸದ ಪ್ರತಾಪ್‍ ಸಿಂಹ ಅವರು ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿರುವ ಎರಡು ಆಸ್ಪತ್ರೆಗಳಿಗೆ ಸಂಸದರ ಅನುದಾನದಿಂದ  ತಲಾ 18 ಲಕ್ಷ ಮೌಲ್ಯದ ಎರಡು ಅಂಬ್ಯುಲೆನ್ಸ್ ನೀಡುವ ಮೂಲಕ ಸಂಸದರ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

 ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಂಸದರ ನಿಧಿಯನ್ನು ಯಾವುದೇ ಟ್ರಸ್ಟ್, ಸೊಸೈಟಿ, ಕೋ ಆಪರೇಟಿವ್ ಸೊಸೈಟಿಗಳಿಗೆ ನೀಡಬಾರದೆಂಬ ನಿಯಮವನ್ನು ಉಲ್ಲಂಘಿಸಿ,  ದಕ್ಷಿಣ ಕನ್ನಡ ಜಿಲ್ಲೆ ಮತ್ತು  ಮೂಡಿಗೆರೆಯಲ್ಲಿ ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿರುವ ಆಸ್ಪತ್ರೆಗಳಿಗೆ ತಲಾ 18 ಲಕ್ಷ ಮೌಲ್ಯದ ಎರಡು  ಅಂಬ್ಯುಲೆನ್ಸ್ ನೀಡಲಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಕೊಡಗು-ಮೈಸೂರು ಕ್ಷೇತ್ರದಲ್ಲಿ  ಕುಗ್ರಾಮಗಳಲ್ಲಿ ಮೂಲಸೌಲಭ್ಯಗಳಿಲ್ಲದ ಅದೆಷ್ಟೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವುದು ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು. 

ಬಿಜೆಪಿಯಲ್ಲಿರುವ ಹಲವು ಮೋರ್ಚಾಗಳಂತೆ ಇದೀಗ ರೌಡಿ ಮೋರ್ಚಾವು ಆರಂಭಗೊಂಡಿದ್ದು, 36 ರೌಡಿಶೀಟರ್‌ಗಳು ಈ ಮೋರ್ಚಾದಲ್ಲಿದ್ದು, ಈಗಾಗಲೇ 10 ರೌಡಿ ರೌಡಿಶೀಟರ್‌ಗಳಿಗೆ ಬಿಜೆಪಿ ಖಾತೆ ತೆರೆಯದಿರುವ ಕ್ಷೇತ್ರಗಳಲ್ಲಿ ಎಂಎಲ್ಎಂ ಟಿಕೆಟ್ ನೀಡಲು ಸಿದ್ದತೆಗಳು ನಡೆಯುತ್ತಿವೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮಡಿಕೇರಿ ಕ್ಷೇತ್ರದಿಂದ 7 ಮತ್ತು ವಿರಾಜಪೇಟೆ ಕ್ಷೇತ್ರದಿಂದ 3 ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಪಕ್ಷದ ವೀಕ್ಷಕರು ಸಭೆ ನಡೆಸಿ, ಕೆಲವು ಮಾನದಂಡಗಳನ್ನು ಅನುಸರಿಸಿ ಪ್ರತಿ ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳ ಹೆಸರನ್ನು ಅಂತಿಮಗೊಳಿಸಿ ಕೆಪಿಸಿಸಿ ಕಳುಹಿಸಲಾಗುವುದೆಂದು ಎಂ.ಲಕ್ಷ್ಮಣ್ ತಿಳಿಸಿದರು.

news-details