Breaking News
   
   
   

ಹೊಸಪಟ್ಟಣದಲ್ಲಿ ವನ್ಯಜೀವಿ-ಮಾನವ ಸಂಘರ್ಷ ಸಭೆ

ಕೊಡಗು

news-details

ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ವನ್ಯಜೀವಿ-ಮಾನವ ಸಂಘರ್ಷ ಕುರಿತು ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಹೊಸಪಟ್ಟಣದಲ್ಲಿ ಅರಣ್ಯ ಇಲಾಖೆ ಹಾಗೂ ರೈತರು ಹಾಗೂ ಬೆಳೆಗಾರರ ಸಭೆ ನಡೆಯಿತು. 


ಕಾಡಾನೆಗಳ ಹಾವಳಿ ಸೇರಿದಂತೆ ವನ್ಯಜೀವಿಗಳು ಕೃಷಿ ಹಾಗೂ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವ ಕುರಿತು ರೈತರು ಮತ್ತು ಬೆಳೆಗಾರರು ಆತಂಕ ತೋಡಿಕೊಂಡರು. ಕಾಡಾನೆ, ಮಂಗಗಳು, ಕೆಂಜೆರಿ, ನವಿಲುಗಳು ಕೃಷಿ ಪ್ರದೇಶಗಳಿಗೆ ಲಗ್ಗೆ ಇಟ್ಟು ಕೃಷಿಫಸಲುಗಳನ್ನು ನಾಶಪಡಿಸುತ್ತಿರುವ ಕುರಿತು ರೈತರು ಅಹವಾಲು ತೋಡಿಕೊಂಡರು. 


ಸಭೆಯಲ್ಲಿ ಪಿಸಿಸಿಎಫ್ ರಾಜ್ ಕಿಶೋರ್ ಸಿಂಗ್ ಅವರು ರೈತರು ಮತ್ತು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಪ್ಪಚ್ಚು ರಂಜನ್ ವಹಿಸಿದ್ದರು. ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ರೈತರು, ಬೆಳೆಗಾರರು ಪಾಲ್ಗೊಂಡಿದ್ದರು.

news-details