ಟಿವಿ1 ಸ್ಪೆಷಲ್ : 2022 ಇನ್ನೇನು ಮುಕ್ತಾಯಗೊಳ್ಳಲಿದ್ದು ಜಗತ್ತು 2023ರೆಡೆಗೆ ಎದುರು ನೋಡುತ್ತಿದೆ. ಅನೇಕ ಏಳು-ಬೀಳುಗಳ ಮಧ್ಯೆ 2022 ಸಾಗಿ ಬಂದಿದ್ದು, ಇದೀಗ 2023ರ ಬಗ್ಗೆ ಹಲವು ನಿರೀಕ್ಷೆ ಇಟ್ಟುಕೊಂಡಿರುವ ಸಂದರ್ಭ ಬಾಬಾ ವಂಗಾ ಮತ್ತೊಮ್ಮೆ ನೆನಪಿಗೆ ಬಂದಿದ್ದಾರೆ.
2023ರ ವರ್ಷದ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯದ ಬಗ್ಗೆ ಇದೀಗ ಚರ್ಚೆಗಾಗುತ್ತಿದ್ದು ಬಲ್ಗೇರಿಯಾದ ಬಾಬಾ ವಂಗಾ ಇದುವರೆಗೂ ನೀಡಿರುವ ಭವಿಷ್ಯಗಳಲ್ಲಿ ಬಹುತೇಕ ಅಂಶಗಳು ಸತ್ಯವಾಗಿವೆ. ಮುಂಬರುವ ವರ್ಷದಲ್ಲೂ ಅದು ನಿಜವಾಗುತ್ತದೆ ಎಂದು ಅವರ ಶಿಷ್ಯಂದಿರು ಹೇಳುತ್ತಿದ್ದಾರೆ.
ಬಾಬಾ ವಂಗಾ ಹೇಳಿರುವಂತೆ 2023ರಲ್ಲಿ ಯುರೋಪಿನಲ್ಲಿ ರಾಸಾಯನಿಕ ದಾಳಿಗಳ ಸಂಖ್ಯೆಯು ಹೆಚ್ಚಾಗುವ ಅಪಾಯವಿದೆ, ಧರ್ಮ ಗಲಭೆಯಲ್ಲಿ ಇಡೀ ಜಗತ್ತು ಮುಳುಗಲಿದ್ದು, ಮುಂದಿನ ವರ್ಷದಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಎಲ್ಲಾ ವಲಯಗಳಲ್ಲಿ ಮತ್ತಷ್ಟು ಬಲಿಷ್ಠವಾಗಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇನ್ನು ಬಿರುಗಾಳಿ ಮತ್ತು ಪರಮಾಣು ಸ್ಫೋಟಕ್ಕೆ ಇಡೀ ಏಷ್ಯಾ ತತ್ತರಿಸಲಿದೆ. ಸೌರ ಚಂಡ ಮಾರುತ ಮತ್ತು ಸೌರ ಸುನಾಮಿಗಳು ಸಂಭವಿಸುತ್ತವೆ. ಇದರಿಂದ ಭೂಮಿಗೆ ಹಾಗೂ ಭೂಮಿಯ ಕಾಂತೀಯ ಶಕ್ತಿಗೆ ಸಾಕಷ್ಟು ಹಾನಿಯಾಗಲಿದೆ. ಅದೇ ರೀತಿ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಸ್ಫೋಟದಿಂದ ಏಷ್ಯಾ ಕಂಡದಲ್ಲಿ ವಿಷಕಾರಿ ಮೋಡವು ಆವರಿಸುವುದಕ್ಕೆ ಕಾರಣವಾಗಬಹುದು. ಇದರ ಪರಿಣಾಮ ಅನೇಕ ರಾಷ್ಟ್ರಗಳಲ್ಲಿ ತೀವ್ರ ರೋಗ ಉಂಟಾಗುತ್ತದೆ. ಅಷ್ಟೆ ಅಲ್ಲ ಮುಂಬರುವ 2023ರ ವರ್ಷದಲ್ಲಿ ಮಾನವರ ಜನನವು ಪ್ರಯೋಗಾಲಯಗಳಲ್ಲಿ ಆಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ಹೇಳಿದ್ದಾರೆ.
ಬಲ್ಗೇರಿಯಾದ ಬಾಬಾ ವಂಗಾ ತಮ್ಮ 12ನೇ ವಯಸ್ಸಿಗೆ ದೃಷ್ಟಿಯನ್ನು ಕಳೆದುಕೊಂಡರು. 1996ರಲ್ಲೇ ನಿಧನರಾಗಿರುವ ಬಾಬಾ ವಂಗಾ, ಭವಿಷ್ಯದ ಕುರಿತು ತಮ್ಮ ಶಿಷ್ಯಂದಿರ ಬಳಿ ಹೇಳಿದ್ದಾರೆ. ಈ ಅಂಶಗಳೆಲ್ಲ ಈಗ ಪುಸ್ತಕವಾಗಿ ಹೊರಹೊಮ್ಮಿವೆ.