Breaking News
   
   
   

ರಾಜಾಸೀಟಿನಲ್ಲಿ ಮಾರ್ದನಿಸಿದ ಕನ್ನಡದ ಕಂಪು ಕಂಗೊಳಿಸಿದ ಕೋಟಿ ಕಂಠ ಗಾಯನ.

ಕೊಡಗು

news-details

ಮಡಿಕೇರಿ : ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೋಟಿ ಕಂಠ ಗಾಯನ ನಡೆಯಿತು.  ಸುಮಾರು 2,500 ವಿದ್ಯಾರ್ಥಿಗಳಿಂದ ಕನ್ನಡದ ಹಾಡು ಹಾಡುವ ಮೂಲಕ ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸಲಾಯಿತು. 

ಶಾಸಕ ಕೆ ಜಿ ಬೋಪಯ್ಯ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ. ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್‌ ಸೇರಿದಂತೆ ನಗರಸಭೆಯ ಸದಸ್ಯರು, ಜಿಲ್ಲೆಯ ಉನ್ನತ ಅಧಿಕಾರಿಗಳು ಕೂಡ ಹಾಡು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾದರು. ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ಸಿಬ್ಬಂದಿ ವೃಂದ ಉತ್ಸಾಹದಿಂದ ಪಾಲ್ಗೊಂಡರು. 
 

news-details