ಪೊನ್ನಂಪೇಟೆ-ಬಿಟ್ಟAಗಾಲ
=====================
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಕುಟ್ಟದಿಂದ ಮಡಿಕೇರಿವರೆಗಿನ ‘ಕೊಡವಾಮೆ ಬಾಳೋ’ ಪಾದಯಾತ್ರೆ 3ನೇ ದಿನ ಪೊನ್ನಂಪೇಟೆಯಿAದ ಗೋಣಿಕೊಪ್ಪಲು- ಬಿಟ್ಟಂಗಾಲದವರೆಗೆ ಸಾಗಿ ಬಂತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕೊಡವ ಕೊಡವತಿಯರ ಸಹಿತ ಮಕ್ಕಳು ಹಾಗೂ ವಯೋವೃದ್ದರೂ ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರೆಗೂ ಮುನ್ನ ಪೊನ್ನಂಪೇಟೆ ಪಟ್ಟಣದ ಸ್ಥಾಪಕ ದಿವಾನ್ ಚೆಪ್ಪುಡಿರ ಪೊನ್ನಪ್ಪ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹೈಸೊಡ್ಲೂರು ಗ್ರಾಮದ 86 ವರ್ಷದ ಬಯವಂಡ ಸರಸ್ವತಿ ಪೂವಯ್ಯ ಸತತ 2ನೇ ದಿನ ಕೂಡ ವೀಲ್ ಚೇರ್‌ನಲ್ಲಿ ಪಾದಯಾತ್ರೆಯಲ್ಲಿ ಸಾಗಿ ಬಂದರು. ಹಾಕಿ ಆಟಗಾರ ಓಲಂಪಿಯನ್ ಸಣ್ಣುವಂಡ ಉತ್ತಪ್ಪ, ಬಿ.ಕೆ ಸುಬ್ರಮಣಿ ಮತ್ತು ಕ್ರೀಡಾ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಅವರುಗಳು ಪಾದಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.
ಈ ಸಂದರ್ಭ ಪಡಿಞರಂಡ ಕೊಡವ ಹೆಗ್ಗಡೆ ಸಮಾಜದ ಅಧ್ಯಕ್ಷರು ಪಿ.ಜಿ ಅಯ್ಯಪ್ಪ , ಕೊಡವ ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪ್ರಭುಕುಮಾರ್ ಟಿವಿ ಒನ್‌ನೊಂದಿಗೆ ಮಾತನಾಡಿದರು.
ಟಿವಿ ಒನ್ ನ್ಯೂಸ್, ಮಡಿಕೇರಿ