Breaking News
   
   
   

ಟಿ.ಶೆಟ್ಟಿಗೇರಿಯಿಂದ ಪೊನ್ನಂಪೇಟೆವರೆಗೆ ನಡೆದ 2ನೇ ದಿನದ ‘ಕೊಡವಾಮೆ ಬಾಳೋ’ ಪಾದಯಾತ್ರೆ-

ಕೊಡಗು

news-details

ಟಿ.ಶೆಟ್ಟಿಗೇರಿ-ಪೊನ್ನಂಪೇಟೆ
======================
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಕುಟ್ಟದಿಂದ ಮಡಿಕೇರಿವರೆಗಿನ ‘ಕೊಡವಾಮೆ ಬಾಳೋ’ ಪಾದಯಾತ್ರೆ 2ನೇ ದಿನ ಟಿ.ಶೆಟ್ಟಿಗೇರಿಯಿಂದ ಪೊನ್ನಂಪೇಟೆವರೆಗೆ ಸುಸೂತ್ರವಾಗಿ ನಡೆಯಿತು. ಟಿ.ಶೆಟ್ಟಿಗೇರಿ-ಹುದಿಕೇರಿ ಮೂಲಕ ಪೊನ್ನಂಪೇಟೆವರೆಗೆ 16 ಕಿಲೋ ಮೀಟರ್ ಶಾಂತಿಯುತ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಸಾಂಪ್ರದಾಯಿಕ ಕೊಡವ ಉಡುಪಿನೊಂದಿಗೆ ತಳಿಯತಕ್ಕಿ ಬೊಳಕ್ ಹಿಡಿದು ಪಾದಯಾತ್ರೆಯಲ್ಲಿ ಸಾಗಿ ಬಂದರು.  ತಾವಳಗೇರಿ ಮಚ್ಚಮಾಡ ಐನ್ ಮನೆಯಲ್ಲಿ ಮಚ್ಚಮಾಡ ಕುಟುಂಬಸ್ಥರು ಪಾದಯಾತ್ರೆಯನ್ನು ಸ್ವಾಗತಿಸಿ ಉಪಚರಿಸಿದರು. ಬಳಿಕ ಐತಿಹಾಸಿಕ ತಾವಳಗೇರಿಯ ಪೆರುಮಾಳ್ ಮಂದ್‌ನಲ್ಲಿರುವ ಪೆರುಮಾಳ್ ಅಚ್ಚ ನಡೆಯಲ್ಲಿ ಪ್ರಾರ್ಥಿಸಿ ಪಾದಯಾತ್ರೆ ಯಶಸ್ವಿಗೆ ಹಾಗೂ ಪಾದಯಾತ್ರೆ ಸಂದರ್ಭ ತೊಟ್ಟಿರುವ ಸಂಕಲ್ಪವನ್ನು ಯಶಸ್ವಿಗೊಳಿಸುವಂತೆ ಪ್ರಾರ್ಥಿಸಲಾಯಿತು.  ಹೈಸೊಡ್ಲೂರು ಗ್ರಾಮದ 86 ವರ್ಷ ಇಳಿವಯಸ್ಸಿನ ಬಯವಂಡ ಸರಸ್ವತಿ ಪೂವಯ್ಯ ಅವರು  ನಡೆಯಲು ಆಗದ  ಕಾರಣ ವೀಲ್ ಚೇರ್‌ನಲ್ಲಿ  ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಕೊಡವ ಅಭಿಮಾನದೊಂದಿಗೆ ಕೊಡವಾಮೆ ಬಾಳೊ ಪಾದಯಾತ್ರೆಯಲ್ಲಿ ಭಾಗವಹಿಸಿದ ಹಿರಿಯ ಮಹಿಳೆ ಎನಿಸಿಕೊಂಡರು. ಕುಟ್ಟದಿಂದ  ಮಡಿಕೇರಿಗೆ ಪಾದಯಾತ್ರೆ ಆರಂಭಿಸಿರುವ ಕೊಡವಾಮೆ ಬಾಳೋ ಪಾದಯಾತ್ರೆ ಮಾಪಿಳ್ಳೆತೋಡ್ ಎಂಬಲ್ಲಿಗೆ ಆಗಮಿಸಿದಾಗ ಮಾಪಿಳ್ಳೆತೋಡಿನ  ಮುಸಲ್ಮಾನ ಬಾಂಧವರು ಪಾದಯಾತ್ರೆಯಲ್ಲಿ ನೆರೆದಿದ್ದ ಸಹಸ್ರಾರು ಮಂದಿಯನ್ನು  ಸ್ವಾಗತ ಕೋರಿ ಬರಮಾಡಿಕೊಂಡರು. ಕೊಡವರ ಬೇಡಿಕೆಗಳನ್ನು ಸರಕಾರ ಪರಿಗಣಿಸುವಂತಾಗಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಂಬಲ ನೀಡಿದ್ದಲ್ಲದೇ, ಹೂಗುಚ್ಛ ನೀಡಿ  ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.  ಈ ಸಂದರ್ಭ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರುಗಳು ಬೆಂಬಲ ನೀಡಿದ ಮುಸಲ್ಮಾನ ಬಂಧುಗಳಿಗೆ ಧನ್ಯವಾದ ಸಲ್ಲಿಸಿ, ಮಡಿಕೇರಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ದೇಶ ತಕ್ಕರು, ವಿವಿಧ ಕೊಡವ ಸಮಾಜ, ಕೊಡವ ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರು, ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಶಾಂತಿಯುತ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಹಾಗೂ ಸಂಘಟನೆಯ ಪ್ರಮುಖ ಮುದೋಶ್ ಪೂವಯ್ಯ ಟಿವಿ ಒನ್‌ನೊಂದಿಗೆ ಮಾತನಾಡಿದರು.
ಬೈಟ್ಸ್-
ಟಿವಿ ಒನ್ ನ್ಯೂಸ್, ಮಡಿಕೇರಿ 

news-details