ದರ್ಶನ್‌ಗೆ ಆಪರೇಷನ್ ಮಾಡದಿದ್ರೆ ಪ್ಯಾರಾಲಿಸಿಸ್ ಸಾಧ್ಯತೆ
ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಬೆನ್ನು ನೋವು ಬೆಂಬಿಡದೆ ಕಾಡುತ್ತಿದೆ.
ತುಂಬಾ ನೋವಿನಿಂದ ಬಳಲುತ್ತಿರುವ ದರ್ಶನ್ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ಗೆ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭದಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹೈಕೋರ್ಟ್‌ಗೆ ವಿಮ್ಸ್ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ದರ್ಶನ್ ಪರ ವಕೀಲ ಸಿ.ವಿ ಅವರು ನಾಗೇಶ್ ಅವರು ಈಗಾಗಲೇ ದರ್ಶನ್‌ಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. MRI ಸಹ ಮಾಡಲಾಗಿದೆ. ಅವರ ಸ್ಪೈನಲ್ ಕಾರ್ಡ್ ಗೆ ರಕ್ತ ಚಲನೆ ಆಗುತ್ತಾ ಇಲ್ಲ. ಇದರಿಂದ ಕಿಡ್ನಿಯ ಸಮಸ್ಯೆಯೂ ಆಗ್ತಾ ಇದೆ. ಡಿಸ್ಕ್ ಕೂಡ ಪ್ರಾಬ್ಲಂ ಆಗಿದೆ. ತಕ್ಷಣವೇ ಆಪರೇಷನ್ ಆಗಬೇಕಿದೆ. ಇಲ್ಲದಿದ್ದರೆ ಪ್ಯಾರಾಲಿಸಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ