ಕಾಮನ್ವೆಲ್ತ್ ಕ್ರೀಡಾಕೂಟ: 9 ಆಟಗಳಿಗೆ ಗೇಟ್‌ಪಾಸ್, ಭಾರತಕ್ಕೆ ಗ್ರೇಟ್ ಲಾಸ್
ಗ್ಲಾಸ್‌ಗೋ: ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಭಾರತ ಪ್ರಾಬಲ್ಯ ಹೊಂದಿರುವ ಹಲವು ಕ್ರೀಡೆಗಳನ್ನು ತೆಗೆದಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಭಾರತದ ವಿವಿಧ ಕ್ರೀಡೆಯ ಅಟಗಾರರು ಮತ್ತು ಕ್ರೀಡಾ ಫೆಡರೇಷನ್‌ಗಳು ಬೇಸರ ವ್ಯಕ್ತಪಡಿಸಿವೆ.
2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್, ಹಾಕಿ ಸೇರಿದಂತೆ ಹಲವು ಕ್ರೀಡೆಗಳನ್ನು ತೆಗೆದುಹಾಕಲಾಗಿದೆ. ಹಣಕಾಸು ವಿಚಾರವಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಸುಮಾರು 9 ಕ್ರೀಡೆಗಳಿಗೆ ಗೇಟ್‌ಪಾಸ್ ನೀಡಲಾಗಿದೆ. ಹೋಸ್ಟಿಂಗ್ ಅಧಿಕಾರ ಹೊಂದಿರುವ ಸ್ಕಾಟ್ಲೆಂಡ್ ರಾಷ್ಟ್ರವು ವೆಚ್ಚ ಕಡಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ.
ಈ ಬಗ್ಗೆ ಭಾರತೀಯ ಆಟಗಾರರು ಹಾಗೂ ವಿವಿಧ ಕ್ರೀಡಾ ಫೆಡರೇಷನ್‌ಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಅಸಹಾಯಕರಾಗಿದ್ದೇವೆ ಎಂದಿವೆ.