Breaking News
   
   
   

ಕುಟ್ಟದಲ್ಲಿ ‘ಕೊಡವಾಮೆ ಬಾಳೋ’ ಶಾಂತಿಯುತ ಬೃಹತ್ ಪಾದಯಾತ್ರೆಗೆ ಚಾಲನೆ- ಟಿ.ಶೆಟ್ಟಿಗೇರಿವರೆಗೆ ನಡೆದ ಮೊದಲ ದಿನದ ಪಾದಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ

ಕೊಡಗು

news-details

ಕುಟ್ಟ-ಟಿ.ಶೆಟ್ಟಿಗೇರಿ
===================
ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆ ಮತ್ತು ಹಕ್ಕುಗಳಿಗಾಗಿ ಆಗ್ರಹಿಸಿ,  ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ‘ಕೊಡವಾಮೆ ಬಾಳೋ’ ಘೋಷವಾಕ್ಯದೊಂದಿಗೆ ಪೊನ್ನಂಪೇಟೆ ತಾಲೂಕಿನ ಕುಟ್ಟದಿಂದ ಟಿ.ಶೆಟ್ಟಿಗೇರಿವರೆಗೆ ಮೊದಲ ದಿನದ ಬೃಹತ್ ಪಾದಯಾತ್ರೆ ನಡೆಸಲಾಯಿತು. ದೇಶ ತಕ್ಕರು, ವಿವಿಧ ಕೊಡವ ಸಮಾಜ, ಕೊಡವ ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರು, ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಕುಟ್ಟ ಬಸ್ ನಿಲ್ದಾಣದಲ್ಲಿ ಶಾಂತಿಯುತ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಹಕ್ಕುಗಳು ಮತ್ತು ಬೇಡಿಕೆಗಳ ಫಲಕಗಳನ್ನು ಹಿಡಿದು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಹಸ್ರಾರು ಕೊಡವ, ಕೊಡವತಿಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕೊಡವ ಸಮುದಾಯದ ಸಾಂವಿಧಾನಿಕ ಹಕ್ಕು, ಸಂಸ್ಕöÈತಿಯ ಭದ್ರತೆ, ಜನಾಂಗೀಯ ಅಸ್ತಿತ್ವವನ್ನು ಕಾಪಾಡುವುದು, ಜನಾಂಗೀಯ ನಿಂದನೆಯ ವಿರುದ್ದ ಕ್ರಮ ಕೈಗೊಳ್ಳುವುದು ಸೇರಿದಂತೆ ತಮ್ಮ ಹಕ್ಕುಗಳ ಪ್ರತಿಪಾದನೆ ನೂರಾರು ಫಲಕಗಳು ‘ಕೊಡವಾಮೆ ಬಾಳೋ’ ಪಾದಯಾತ್ರೆಯಲ್ಲಿ ಕಂಡು ಬಂದವು. ಪಾದಯಾತ್ರೆ ಸಂಬAಧ ಜಿಲ್ಲೆಯ ಪ್ರತೀ ನಾಡ್, ಊರ್, ಒಕ್ಕಗಳಲ್ಲಿ ಸ್ವಯಂ ಪ್ರೇರಿತರಾಗಿ ಜನರೇ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಮ್ಮ ಹಕ್ಕಿಗಾಗಿ ಹೋರಾಡಲು ಸದಾ ಸಿದ್ಧ ಎಂಬ ಸಂದೇಶ ಸಾರಿದರು. ಪಾದಯಾತ್ರೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ, ಯಾವುದೇ ಘೋಷಣೆಗಳಿಲ್ಲದೆ, ಭಾಷಣಗಳನ್ನು ಮಾಡದೆ, ಸಮುದಾಯಗಳ ಭಾವನೆಗಳಿಗೆ ಆಗಿರುವ ವೇದನೆಗಳಿಗೆ ಒತ್ತು ನೀಡಿ  ಶಾಂತಿಯುತವಾಗಿ ನಡೆಸಲಾಯಿತು. ಮಾರ್ಗದುದ್ದಕ್ಕೂ ಶುಚಿತ್ವ, ಆಹಾರ, ನೀರು, ಪಾನೀಯಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಬೆಂಗಳೂರು, ಮೈಸೂರು ಕೊಡವ ಸಮಾಜ ಸೇರಿದಂತೆ ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳ ಪ್ರಮುಖರು, ಸದಸ್ಯರು ಪಾದಯಾತ್ರೆಯಲ್ಲಿ ಸಾಗಿ ಬಂದರು.  ಕೊಡವಾಮೆ ಬಾಳೋ ಪಾದಯಾತ್ರೆ ಫೆಬ್ರವರಿ ೨ರಿಂದ ಕುಟ್ಟದಲ್ಲಿ ಆರಂಭ ಕಂಡು ಫೆಬ್ರವರಿ ೭ರಂದು ಮಡಿಕೇರಿಯಲ್ಲಿ ಸಮಾರೋಪ ಕಾಣಲಿದೆ. ಮೊದಲ ದಿನದ ಪಾದಯಾತ್ರೆ ಕುಟ್ಟದಿಂದ ಪ್ರಾರಂಭವಾಗಿ ಶ್ರೀಮಂಗಲ ಮಾರ್ಗವಾಗಿ ಟಿ.ಶೆಟ್ಟಿಗೇರಿವರೆಗಿನ ಒಟ್ಟು ೧೪ ಕಿಲೋ ಮೀಟರ್ ದೂರವನ್ನು ಪೂರ್ಣಗೊಳಿಸಿತು. ಟಿ.ಶೆಟ್ಟಿಗೇರಿಯಲ್ಲಿ ಟಿವಿ ಒನ್‌ನೊಂದಿಗೆ  ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು, ಪಾದಯಾತ್ರೆ ಒಟ್ಟು ೮೨ ಕಿಲೋ ಮೀಟರ್ ದೂರವನ್ನು ಕ್ರಮಿಸಲಿದ್ದು, ೨ನೇ ಹಂತದ ಪಾದಯಾತ್ರೆ ಫೆಬ್ರವರಿ ೩ರ ಬೆಳಗ್ಗೆ ೯.೩೦ ಗಂಟೆಗೆ ಮತ್ತೆ ಆರಂಭವಾಗಲಿದೆ. ಫೆಬ್ರವರಿ ೭ರಂದು ಮಡಿಕೇರಿ ಕೊಡವ ಸಮಾಜದ ಮಂದ್‌ನಲ್ಲಿ ಪಾದಯಾತ್ರೆ ಸಮಾರೋಪವಾಗಲಿದ್ದು, ಕೊನೆಯ ದಿನ ೨೫ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಬೈಟ್-
ಟಿವಿ ಒನ್ ನ್ಯೂಸ್, ವಿಡಿಯೋ ಜರ್ನಲಿಸ್ಟ್ ಮೋಹನ್ ಜತೆ ಹೆಚ್.ಎಸ್.ಪ್ರಸಾದ್, ದಕ್ಷಿಣಾ ಮೂರ್ತಿ ಮಡಿಕೇರಿ ಮತ್ತು ಅಣ್ಣೀರ ಹರೀಶ್ ಮಾದಪ್ಪ, ಶ್ರೀಮಂಗಲ


 

news-details