Breaking News
   
   
   

ಹರಿದ್ವಾರದಲ್ಲಿ ಅಡಗಿದ್ದ ಕೊಲೆ ಆರೋಪಿ ಬಗ್ಗು ಬಡಿದ ಕೊಡಗು ಪೊಲೀಸ್.. ಅರೆಬೆಂದ ಮೃತದೇಹದ ಹಿಂದಿತ್ತು ಲವ್ ಕಹಾನಿ..

ಕ್ರೈಮ್ ನ್ಯೂಸ್

news-details

 ಹರಿದ್ವಾರದಲ್ಲಿ ಅಡಗಿದ್ದ  ಕೊಲೆ ಆರೋಪಿ ಬಗ್ಗು ಬಡಿದ ಕೊಡಗು ಪೊಲೀಸ್.. ಅರೆಬೆಂದ ಮೃತದೇಹದ ಹಿಂದಿತ್ತು ಲವ್ ಕಹಾನಿ...ಛಲ ಬಿಡದೆ ಪ್ರಕರಣ ಭೇಧಿಸಿದ ಕೊಡಗು ಪೋಲಿಸ್. 

 *ಪ್ರಕರಣದ ವಿವರ*
ಅ.10 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ರವರ ಕಾಫಿ ತೋಟದಲ್ಲಿ ಅರ್ಧಂಬರ್ಧ ಬೆಂದಿರುವ ಗಂಡಸಿನ ಶವವನ್ನು ಕಾಫಿ ತೋಟದ ಕೆಲಸಗಾರರು ನೋಡಿದ್ದು, ತೋಟದ ಮಾಲಿಕರು ನೀಡಿದ ದೂರಿಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 103, 234 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ. 
ಕೃತ್ಯ ಸ್ಥಳಕ್ಕೆ ಭೇಟಿ ನೀಡಿದ ರಾಮರಾಜನ್.ಕೆ. ಪೊಲೀಸ್ ಅಧೀಕ್ಷಕರು, ಸುಂದರ್ ರಾಜ್.ಕೆ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರವರ ಮಾರ್ಗದರ್ಶನದಲ್ಲಿ ಮತ್ತು ಗಂಗಾಧರಪ್ಪ ಆರ್.ವಿ, ಪೊಲೀಸ್ ಉಪ ಅಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ ರವರ ನೇತೃತ್ವದಲ್ಲಿ ಮೃತನ ಪತ್ತೆ ಹಾಗೂ ಘಟನೆಗೆ ಸಂಬಂಧಿಸಿದ ಆರೋಪಿಗಳ ಪತ್ತೆಗೆ ಸಿಪಿಐ ಕುಶಾಲನಗರ ವೃತ್ತ, ಪಿ.ಐ. ಸೋಮವಾರಪೇಟೆ ಠಾಣೆ ಹಾಗೂ ಪಿಎಸ್ಐ, ಸುಂಟಿಕೊಪ್ಪ ಪೊಲೀಸ್ ಠಾಣೆ, ಪಿಎಸ್ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡಂತೆ 16 ಜನರ ಒಟ್ಟು 4 ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಅರ್ಧ ಸುಟ್ಟು ಕರಕಲಾಗಿರುವ ಮೃತದೇಹ ಯಾರದೆಂಬುದು ಗೊತ್ತಿಲ್ಲದೇ ಇದ್ದು, ಪೊಲೀಸರಿಗೆ ಪತ್ತೆಕಾರ್ಯ ಒಂದು ಸವಾಲಾಗಿದ್ದು, ತಂಡವು ತಾಂತ್ರಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಸುಮಾರು 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಿ ಸದರಿ ಮಾರ್ಗದಲ್ಲಿ ಸಂಚರಿಸಿರುವ ವಾಹನಗಳ ಪರಿಶೀಲನೆ, ಮೊಬೈಲ್ ಕರೆಗಳ ಜಾಡನ್ನು ಹಿಡಿದು ಸತತ 10 ದಿನಗಳವರೆಗೆ ಮಾಹಿತಿ ಸಂಗ್ರಹಣೆ ಕಾರ್ಯಚರಣೆ ನಡೆಸಿರುತ್ತಾರೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಿದ್ದು, ಕೊನೆಯದಾಗಿ ಕೃತ್ಯಕ್ಕೆ ಬಳಸಿರಬಹುದಾದ ಸಂಶಾಯಸ್ಪದ ಕಾರಿನ ಮಾಹಿತಿ ಆದಾರದ ಮೇಲೆ ಮೃತ ರಮೇಶ್ ಕುಮಾರ್, 54 ವರ್ಷ, ಹೈದರಾಬಾದ್ ಎಂಬುದಾಗಿ ಪತ್ತೆಹಚ್ಚಿರುತ್ತಾರೆ.

 ಆತನನ್ನು ಕೊಲೆ ಮಾಡಿದ ಆರೋಪಿಗಳಾದ ಆತನ 2ನೇ ಹೆಂಡತಿ ನಿಹಾರಿಕಾ ಮತ್ತು ಆಕೆಯ ಬಾಯ್ ಫ್ರೆಂಡ್ ಗಳಾದ ಹರಿಯಾಣ ಮೂಲದ ಅಂಕುಲ್ ರಾಣ ಮತ್ತು ಬೆಂಗಳೂರು ವಾಸಿ ನಿಖಿಲ್ ಎಂಬುವವರನ್ನು ಬಂದಿಸಿ ಕೃತ್ಯಕ್ಕೆ ಬಳಸಿದ Mercedes benz, ಕಾರನ್ನು ವಶಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಘಟನೆಯ ಸಂಕ್ಷಿಪ್ತ ವಿವರ
ಆರೋಪಿಯು ನಿಹಾರಿಕ ಮೃತ ರಮೇಶ್ ಕುಮಾರ್ನನ್ನು ವಿವಾಹವಾಗಿದ್ದು, ನಿಹಾರಿಕಾಳು ಆಸ್ತಿ ಮಾರಾಟದಲ್ಲಿ 8 ಕೋಟಿ ಹಣ ಪಡೆಯುವ ಉದ್ದೇಶದಿಂದ, ನಿಹಾರಿಕಾಳ ಮತ್ತೊಬ್ಬ ಬಾಯ್ ಫ್ರೆಂಡ್ ಹರಿಯಾಣ ಮೂಲದ ಅಂಕುರ್ ರಾಣ ಎಂಬಾತನನ್ನು ದಿನಾಂಕ 01-10-2024 ರಂದು ಹೈದರಾಬಾದ್ ಬರಲು ತಿಳಿಸಿರುತ್ತಾಳೆ. ದಿನಾಂಕ 03-10-2024 ರಂದು ನಿಹಾರಿಕಳು ರಮೇಶ್ ಕುಮಾರ್ನನ್ನು ಬರಲು ತಿಳಿಸಿ, ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ರಮೇಶ್ ಕುಮಾರ್ನ Mercedes benz (TS- 07-FS-5679) ಕಾರಿನಲ್ಲಿ ಹೊರಟು ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಅಂಕುರ್ ರಾಣಾನೊಂದಿಗೆ ಸೇರಿ ರಮೇಶ್ ಕುಮಾರ್ ನನ್ನು ಕೊಲೆ ಮಾಡಿ ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬಂದು ತನ್ನ ಬಾಯ್ಫ್ ಫ್ರೆಂಡ್  ನಿಖಿಲ್ ರವರ ಬಳಿ ವಿಚಾರ ತಿಳಿಸಿ ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿ ಪನ್ಯ ಎಸ್ಟೇಟ್ಗೆ ತಂದು ಯಾರಿಗೂ ಗೊತ್ತಾಗದಂತೆ ಬೆಂಕಿ ಹಚ್ಚಿ ಕಾರಿನೊಂದಿಗೆ ತೆರಳಿರುತ್ತಾರೆ.


ವಿಶೇಷ ತನಿಖಾ ತಂಡವು ಪ್ರಕರಣವನ್ನು ಭೇದಿಸಿ ದಿನಾಂಕ : 22-10-2024 ರಂದು ಮೊದಲಿಗೆ ನಿಹಾರಿಕಾ ಮತ್ತು ನಿಖಿಲ್ ನನ್ನು ಬಂದಿಸಿ ವಿಚಾರಣೆ ಮಾಡಿ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

 ವಿಶೇಷ ತನಿಖಾಧಿಕಾರಿಯಾಗಿ ಸೋಮವಾರಪೇಟೆ ಠಾಣೆಯ ಪೊಲೀಸ್ ನಿರೀಕ್ಷಕರಾದ ಮುದ್ದು ಮಾದೇವ ರವರನ್ನು ನೇಮಿಸಿ ತನಿಖೆ ಮುಂದುವರೆಸಿರುತ್ತಾರೆ.


ಪ್ರಕರಣದ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಂಕುರ್್ರ ರಾಣ ಈತನ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಪಿಎಸ್ಐ, ಚಂದ್ರಶೇಖ, ಸಿಬ್ಬಂದಿಯವರಾದ ರಂಜಿತ್, ಉದಯಕುಮಾರ್, ಸುದೀಶ್ ಕುಮಾರ್ ರವರು ಹರಿದ್ವಾರಕ್ಕೆ ತೆರಳಿ ಮಿಂಚಿನ ಕಾರ್ಯಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡು ಕರೆತರುವಲ್ಲಿ ಯಶಸ್ವಿಯಾಗಿರುತ್ತಾರೆ.

news-details