Breaking News
   
   
   

ಕಂದಾಯ ಇಲಾಖೆ ಆಯುಕ್ತರ ಬಳಿ ಶಾಸಕ ಡಾ.ಮಂತರಗೌಡ ನೇತೃತ್ವದಲ್ಲಿ ರೈತರ ನಿಯೋಗ

ರಾಜ್ಯ

news-details

ವರದಿ ಕೆ ಆರ್ ಗಣೇಶ್ ಕೂಡಿಗೆ 

ಕಂದಾಯ ಇಲಾಖೆ ಆಯುಕ್ತರ ಬಳಿ  ಶಾಸಕ ಡಾ.ಮಂತರಗೌಡ ನೇತೃತ್ವದಲ್ಲಿ ರೈತರ ನಿಯೋಗ...

ಕೂಡಿಗೆ  : ಸರ್ಕಾರದಿಂದ ರೈತರು ಹಾಗೂ ಜನಸಾಮಾನ್ಯರಿಗೆ ಸಿಗುವ ಸವಲತ್ತುಗಳನ್ನು ಪಡೆಯುವಲ್ಲಿ ಫ್ರೂಟ್ ತಂತ್ರಾಂಶ ಸೇರ್ಪಡೆಯಾಗದ ಕಾರಣ ಅನೇಕ ರೈತರು ಸರ್ಕಾರದ ಸೌಲಭ್ಯಗಳು, ಬ್ಯಾಂಕುಗಳಿಂದ ಸಾಲ ಸೌಲಭ್ಯ , ಕೃಷಿ ಇಲಾಖೆಯಿಂದ ಪರಿಕರಗಳು ಮೊದಲಾದ ಪ್ರಯೋಜನಗಳನ್ನು ಪಡೆದುಕೊಳ್ಳಲು ಅನಾನುಕೂಲವಾಗುತ್ತಿರುವ ಬಗ್ಗೆ ಮಡಿಕೇರಿ ಶಾಸಕ ಡಾ.ಮಂತರಗೌಡ ಅವರಲ್ಲಿ ಕುಶಾಲನಗರ ತಾಲ್ಲೂಕಿನ ಕೂಡಿಗೆ ಹಾಗೂ ಕೂಡುಮಂಗಳೂರು ವಿವಿಧೆಡೆಗಳ ರೈತರು ಅನೇಕ ಬಾರಿ ಅಹವಾಲು ಹೇಳಿಕೊಳ್ಳುತ್ತಿದ್ದರು.
ಈ ಬಗ್ಗೆ ಶಾಸಕರು ತಾಲ್ಲೂಕಿನ ತಹಸೀಲ್ದಾರ್ ಅವರ ಬಳಿ ಮಾಹಿತಿ ಕೇಳುತ್ತಿದ್ದ ಸಂದರ್ಭ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಈಗಾಗಲೇ  (ಎಫ್ ಐ ಡಿ ) ಫ್ರೂಟ್ ತಂತ್ರಾಂಶದಿಂದ ಹೊರತಾಗಿರುವ ರೈತರನ್ನು ಸೇರ್ಪಡೆಗೊಳಿಸಲು  ಸರ್ಕಾರದ ಮಟ್ಟದಲ್ಲೇ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿಯೇ ಆಗಬೇಕಿದೆ ಎಂದು ಹೇಳಿದ ಮೇರೆಗೆ ಗುರುವಾರ ಕ್ಷೇತ್ರದ ಶಾಸಕರಾದ ಡಾ.ಮಂತರಗೌಡ ಅವರ ಬಳಿ ಕೂಡಿಗೆ ಗ್ರಾಪಂ ಸದಸ್ಯರೂ ಆದ ಕಾಂಗ್ರೆಸ್ ಪಕ್ಷದ ಮುಖಂಡ ಅಸಂಘಟಿತ ಕಾರ್ಮಿಕ ಘಟಕದ ಕೊಡಗು  ಜಿಲ್ಲಾಧ್ಯಕ್ಷ  ಟಿ.ಪಿ.ಹಮೀದ್ ಅವರ ನೇತೃತ್ವದ ನಿಯೋಗ ಬೆಂಗಳೂರಿಗೆ  ತೆರಳಿತು.ಬಳಿಕ ಶಾಸಕ ಮಂತರಗೌಡ ಅವರು ಕಂದಾಯ ಇಲಾಖೆಯ ಪ್ರಧಾನ ಆಯುಕ್ತ  ಪೊಮ್ಮಲ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಅಹವಾಲು ಹೇಳಿಕೊಂಡಿತು.
ಈ ಸಂದರ್ಭ ಕಂದಾಯ ಇಲಾಖೆಯ  ಆಯುಕ್ತರು ಈ ಬಗ್ಗೆ ಪರಾಮರ್ಶಿಸಲಾಗುವುದು. ಸರ್ಕಾರದ ಸೌಲಭ್ಯಗಳಿಂದ ಹೊರಗುಳಿದ ರೈತರ ಪಟ್ಟಿ ಮಾಡಿ ಕೂಡಲೇ ಫ್ರೂಟ್ ತಂತ್ರಾಂಶಕ್ಕೆ ಸೇರ್ಪಡೆಗೊಳಿಸುವ ಭರವಸೆ ನೀಡಿದರು ಎನ್ನಲಾಗಿದೆ.
ನಿಯೋಗದಲ್ಲಿ  ಕೆಪಿಸಿಸಿ ಸದಸ್ಯ ಬೇಳೂರಿನ ಯಾಕುಬ್, ಭುವನಗಿರಿ ಗಿಡ್ಡಯ್ಯ, ಮಲ್ಲೇನಹಳ್ಳಿ ವೀರಭದ್ರ, ವಿಜಯನಗರ ಶಿವಕುಮಾರ್

news-details