Breaking News
   
   
   

ಹೊಸ ಲುಕ್ ನಲ್ಲಿ BSNL ಲೋಗೋ 

ದೇಶ

news-details

ಹೊಸ ಲುಕ್ ನಲ್ಲಿ BSNL ಲೋಗೋ 

ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಿಗೆ ಟಕ್ಕರ್ ಕೊಡುತ್ತಿರುವ 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್' ( BSNL) ಹೊಸ ಆಕರ್ಷಣೆಯಲ್ಲಿ ಸಾರ್ವಜನಿಕರ ಮುಂದೆ ಬಂದಿದೆ. ಈ ಹೊಸ ಲುಕ್‌ನಲ್ಲಿ ಕಂಗೊಳ್ಳಿಸುತ್ತಿರುವ ಬಿಎಸ್‌ಎನ್‌ಎಲ್ ಜಿಯೋ, ಏರ್‌ಟೆಲ್, ವೋಡಾಫೋನ್‌ಗಿಂತಲೂ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ಕೊಡುತ್ತಿದೆ. ಇದೀಗ 'ಹೊಸ ಲೋಗೊ' ಸಮೇತವಾಗಿ ಅಖಾಡಕ್ಕೆ ಇಳಿದಿದೆ.

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ತನ್ನ ಲೋಗೋ ಅನ್ನು ಬದಲಾಯಿಸಿಕೊಂಡು, ಹೊಸ ಚೈತನ್ಯದೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಬಳಕೆದಾರ ಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳನ್ನು ಒಂದರ ಮೇಲೊಂದರಲ್ಲಿ ಘೋಷಿಸುತ್ತಿರುವ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಲೋಗೋ ಬದಲಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸಿದೆ. ಅಲ್ಲದೇ ಗ್ರಾಹಕರಿಗೆ ಏಳು ಹೊಸ ವೈಶಿಷ್ಯತೆಗಳನ್ನು ಘೋಷಿಸಿದೆ.

BSNL ಹೊಸ ಲೋಗೋ ವಿಶೇಷತೆ ಏನು?

ಈ ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ. ಬಿಎಸ್‌ಎನ್‌ಎಲ್ ಕನೆಕ್ಟಿಂಗ್ ಪೀಪಲ್ ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ 'ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ' ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ.

ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಒಟ್ಟಾರೆ ಈ ಮೂರ ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಲಾಗಿದೆ.

ಹೊಸ ಹುರುಪು, ಹಲವು ಪ್ಲಾನ್ ಘೋಷಣೆ

ಜಿಯೋ, ಏರ್‌ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವೆ. ಆದರೆ ಬಿಎಸ್‌ಎನ್‌ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು ಇತರ ಕಂಪನಿಗಳ ಪ್ಲಾನ್‌ಗಿಂತ ಕಡಿಮೆ ಇದೆ.
 
ಟಾಟಾ ಸಮೂಹದ ಜೊತೆಗೆ 1500 ಕೋಟಿ ರೂಪಾಯಿ ಒಪ್ಪಂದದ ಬಳಿಕ ಬಿಎಸ್‌ಎನ್‌ಎಲ್ ಶರವೇಗದಲ್ಲಿ ಮೇಲ್ದರ್ಜೆಗೆ ಬರುತ್ತಿದೆ. ಈಗಾಗಲೇ ಸಾವಿರಾರು ಟವರ್‌ಗಳನ್ನು ಹಾಕುತ್ತಿರುವ ಬಿಎಸ್‌ಎನ್‌ಎಲ್‌, 4ಜಿ ಜೊತೆ ಜೊತೆಗೆ 5ಜಿ ಇಂಟರ್‌ನೆಟ್ ಸೇವೆ ಒದಿಗುತ್ತಿದೆ. ಈ ಮಹಾ ಒಪ್ಪಂದಿಂದ BSNL ಗೆ ಚೈತನ್ಯ ಬಂದಿದೆ. ಹೊಸ ಹೊಸ ಯೋಜನೆ ಘೋಷಿಸುತ್ತಿರುವ BSNLಮುಂದುವರಿದ ಭಾಗವಾಗಿ ಇದೀಗ ಲೋಗೋ ಬದಲಾಯಿಸಿಕೊಂಡು ಮಾರುಕಟ್ಟೆಯಲ್ಲಿ ಕಮಾಲ್ ಮಾಡಲು ಮುಂದಾಗಿದೆ.

91 ರೂಪಾಯಿ ರಿಚಾರ್ಜ್ ಪ್ಲಾನ್, 147 ರೂ.ಗೆ 30 ದಿನದ ಪ್ಲಾನ್, 187 ರೂ.ಗೆ 28 ದಿನಗಳ ಪ್ಲಾನ್, 247 ರೂ.ಗೆ 30 ದಿನ ಪ್ಲಾನ್ ಇದೆ. ಇಂಟರ್‌ನೆಟ್ ಸೇವೆ ಆಧಾರದಲ್ಲಿ ಹಣದಲ್ಲಿ ವ್ಯತ್ಯಾಸ ಕಾರಣಬಹುದು. ಕೇವಲ 1515 ರೂಪಾಯಿಗೆ ಒಂದು ವರ್ಷದ ಮೊಬೈಲ್ ರಿಚಾರ್ಜ್ ಪ್ಲಾನ್ ಸೇರಿದಂತೆ ಹಲವು ಜನ ಸ್ನೇಹಿ ಯೋಜನೆ ಘೋಷಿಸಿದೆ.
 

news-details