ವಿದ್ಯಾರ್ಥಿಗಳ ಅನುಕೂಲಕ್ಕಾಗಿ
ಕಳೆದ ಎರಡು ವರ್ಷಗಳ ಶೈಕ್ಷಣಿಕ ಚಟುವಟಿಕೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಸಾಕಷ್ಟು ಬದಲಾವಣೆಯೋಂದಿಗೆ ಉನ್ನತಿಕಾರಣಗೋಳಿಸಿ
ಹಲವಾರು ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲಾಗಿದೆ
ಕಾವೇರಿ ಎಜುಕೇಶನ್ ಸೊಸೈಟಿ(ರಿ) ಅಧ್ಯಕ್ಷರಾಗಿರುವ ಪ್ರೊ.ಐ.ಕೆ.ಬಿದ್ದಪ್ಪ, ಉಪಾಧ್ಯಕ್ಷರಾಗಿರುವ ಶ್ರೀ.ಸುಬ್ರಮಣಿ, ಗೌರವ ಕಾರ್ಯದರ್ಶಿ ಶ್ರೀ.ಕೆ.ಪಿ.ಬೋಪಣ್ಣ, ಖಜಾಂಚಿ ಶ್ರೀ.ಸಿ.ಡಿ.ಮಾದಪ್ಪ ಹಾಗೂ ನಿರ್ದೇಶಕರುಗಳ ನೇತೃತ್ವದ ಆಡಳಿತ ಮಂಡಳಿಯ ಅವಧಿಯಲ್ಲಿ ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಕಾಲೇಜುಗಳ ಮೂಲಭೂತ. ಸೌಕರ್ಯಗಳೊಂದಿಗೆ, ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿಯನ್ನು ಕಾಣುವ ಮೂಲಕ ದಕ್ಷಿಣ ಕೊಡಗಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಪ್ರಗತಿ ಪಥದಲ್ಲಿ ಮುನ್ನಡೆದಿದೆ.
ಸಂಸ್ಥೆಯ ಅಧೀನ ಕಾಲೇಜುಗಳಲ್ಲಿ ನಗದು ರಹಿತ ವಹಿವಾಟು ಜಾರಿಗೆ ತರುವ ಮೂಲಕ ಹಣಕಾಸು ವ್ಯವಹಾರದಲ್ಲಿ ಆಗುತ್ತಿದ್ದ ಗೊಂದಲವನ್ನು ನಿವಾರಿಸಲಾಗಿದೆ.
ಗೋಣಿಕೊಪ್ಪಲು, ಕಾವೇರಿ ಕಾಲೇಜಿಗೆ ಮೂರು ಕಾಲೇಜು ಬಸ್ಸುಗಳನ್ನು ಖರೀದಿಸಲಾಗಿದ್ದು, ಇದರಿಂದ ಗ್ರಾಮೀಣಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಹಕಾರಿಯಾಗಿದೆ. ಸಿ.ಪಿ.ಕುಶಾಲಪ್ಪ ಸ್ಮಾರಕ ಸಭಾಭವನದ ಮೊದಲ ಅಂತಸ್ತಿನಲ್ಲಿ ಸೆಂಟ್ರಲೈಸ್ಟ್ ಎ.ಸಿ. ನಿರ್ಮಿತ ಸೆಮಿನಾರ್ ಹಾಲ್ ಹಾಗೂ ಯು.ಪಿ.ವಿ.ಸಿ ಕಿಟಕಿ ಮತ್ತು ಬಾಗಿಲುಗಳ ಆಳವಡಿಸಿದ್ದು. ನೂತನ 100 ಚೇರ್‌ಗಳನ್ನು ಖರೀದಿಸಿದೆ. ಉತ್ತಮ ಗುಣಮಟ್ಟದ ಸೌಂಡ್ ಸಿಸ್ಟಂ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕಾಲೇಜು ಮುಂಭಾಗದಲ್ಲಿರುವ ಕಾವೇರಿ ಉದ್ಯಾನವನ್ನು ಮನರ್ ನಿರ್ಮಾಣ ಮಾಡಿ ಚಂದಗಾಣಿಸಿದೆ. 2024-25ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಬಿ.ಸಿ.ಎ and Artificial Intelligence & Machine Learning and Full Stack, ಕೋರ್ಸ್ ಗಳನ್ನು ಲ್ಯಾಬ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗೆ ಕಂಪ್ಯೂಟರ್ ಆನ್‌ಲೈನ್ ಬ್ಯಾಟರಿ ಮತ್ತು ಇನ್‌ವರ್ಟರಗಳನ್ನು ಖರೀದಿಸಿ ಅಳವಡಿಸಲಾಗಿದೆ. ಕಾಲೇಜು ಕಟ್ಟಡಗಳ ಪೇಯಿಂಟಿಂಗ್ ಕೆಲಸ ಮಾಡಿ: ಸುಂದರಗೊಳಿಸಲಾಗಿದೆ. ಗೋಣಿಕೊಪ್ಪಲು ಪಂಚಾಯಿತಿ ವತಿಯಿಂದ ವಿದ್ಯುತ್ ದೀಪ ಅಳವಡಿಕೆ ಮಾಡಿಸಲಾಗಿದೆ. ಕಾಲೇಜಿನ ಮುಖ್ಯ ಕಟ್ಟಡದ ಮುಂಭಾಗ ಅಸ್ತವ್ಯಸ್ತವಾಗಿ ಜೋತಾಡುತ್ತಾ ಕಾಲೇಜು ಕಟ್ಟಡದ ಅಂದಗೆಡಿಸಿದ್ದ ವೈರಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸರಿಪಡಿಸಲಾಗಿದೆ. ಕುಡಿಯುವ ನೀರು ಶುದ್ದೀಕರಣ ಘಟಕಗಳ ನಿರ್ಮಾಣ ಮಾಡಲಾಗಿದೆ. ಕಾಲೇಜಿನಲ್ಲಿ ಪುರುಷರ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಳವಡಿಸಿ ಸೆಮಿನಾರ್ ಹಾಲ್‌ಗೆ ಕಾವೇರಿ ಮಾತೆಯ ಮಂಟಪದ ಸುತ್ತ ಗ್ರಾನೈಟ್ ಅಳವಡಿಸಿ ಸುಂದರಗೊಳಿಸಲಾಗಿದೆ. ಪದವಿ, ಪದವಿ ಪೂರ್ವ, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನೂತನ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ಪದವಿ ಪೂರ್ವ ಕಾಲೇಜಿನಿಂದ ಪದವಿ ಕಾಲೇಜಿಗೆ ಸಂಪರ್ಕ ಕಲ್ಪಿಸುವಲ್ಲಿ ಕೆನೋಪಿ ನಿರ್ಮಾಣ ಮಾಡಲಾಗಿದೆ. ಕಾಲೇಜುಗಳ ನಾಮಫಲಕ ಮತ್ತು ಸೂಚನಾ ಫಲಕಗಳನ್ನು ನೂತನವಾಗಿ ಅಳವಡಿಸಲಾಗಿದೆ. ಕಾಲೇಜುಗಳ ಕ್ಯಾಂಟೀನ್‌ಗೆ ಅಲ್ಯೂಮಿನಿಯಂ ಪಾರ್ಟೀಸಿಯನ್ ಕೆಲಸು ಕುರ್ಚಿ ಮತ್ತು ಟೇಬಲ್ ಖರೀದಿ ಮಾಡಲಾಗಿದೆ. ಸಭಾಭವನ ಕಟ್ಟಡದಿಂದ ಸ್ಟೇಷನರಿ ಸ್ಟೋರ್ ಇರುವ ಜಾಗಕ್ಕೆ ಇಂಟರ್‌ಲಾಕ್ ಅಳವಡಿಕೆ ಮಾಡಲಾಗಿದೆ. ಕಾಲೇಜಿನ ಮುಂಭಾಗ ಹಾಗೂ ಪ್ರಾಂಶುಪಾಲರ ಕೊಠಡಿಯಲ್ಲಿ ಪೋಕೇಸ್ ನಿರ್ಮಾಣ ಮಾಡಿ ಅಲ್ಲಿ ಟ್ರೋಫಿಗಳನ್ನು ಜೋಡಿಸಲಾಗಿದೆ. ಎಲ್.ಇ.ಡಿ ಟಿ.ವಿಯನ್ನು ಆಳವಡಿಸಲಾಗಿದೆ. ಕಾಲೇಜು ಆವರಣದಲ್ಲಿ ಕಲ್ಲುಬೆಂಚುಗಳನ್ನು ಆಳವಡಿಸಲಾಗಿದೆ.
ಕಾಲೇಜು ಮುಖ್ಯ ಕಟ್ಟಡದಿಂದ ಗ್ರಂಥಾಲಯದವರೆಗೆ ಕೆನೋಪಿ ನಿರ್ಮಾಣ ಹಾಗೂ ಇಂಟರ್ ಲಾಕ್ ಅಳವಡಿಕೆ. ಬೈಕ್ ಶೆಡ್ ನಿರ್ಮಾಣ, ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ವಿರಾಜಪೇಟೆ, ಕಾವೇರಿ ಕಾಲೇಜು ಸ್ಥಳ ದಾಖಲಾತಿಯ ಬಗ್ಗೆ 40 ವರ್ಷಗಳಿಂದ ಇದ್ದ ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಆರ್.ಟಿ.ಸಿ.ಯನ್ನು ಕಾವೇರಿ ವಿದ್ಯಾಸಂಸ್ಥೆಯ ಹೆಸರಿಗೆ ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಕಾಲೇಜು ಸಿಬ್ಬಂದಿಗಳ ಸುರಕ್ಷರತೆ
ನಮ್ಮ ಸಂಸ್ಥೆಯ ಬೋಧಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳನ್ನು ಇ.ಎಸ್.ಐ ಸೌಲಭ್ಯಕ್ಕೆ ಒಳಪಡಿಸಲಾಗಿದೆ. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಹಾಗೂ ಸೇವಾ ಹಿರಿತನವನ್ನು ಗಮನದಲ್ಲಿರಿಸಿಕೊಂಡು ಸುಮಾರು 50% ಗ್ರಾಚ್ಯುಟಿ ಹಣವನ್ನು ನೀಡಲಾಗಿದೆ.
ಗೋಣಿಕೊಪ್ಪಲು ಮತ್ತು ವಿರಾಜಪೇಟೆಯಲ್ಲಿನ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಸಂಬಂಧ ಅಗತ್ಯವಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಸೂಚನೆಯಂತೆ ಪೂರಕವಾದ ದಾಖಲೆಗಳೊಂದಿಗೆ ಸಲ್ಲಿಸಲಾಗಿದೆ. ಇದರಿಂದಾಗಿ ಪದವಿ ವಿಭಾಗದ 12 ಹುದ್ದೆಗಳು ತರಗತಿ ಕಾರ್ಯಭಾರಕ್ಕನುಸಾರವಾಗಿ ಮಂಜೂರಾಗಿದ್ದು, ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಂಡಿದ್ದು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ನೆನಗುದಿಗೆ ಬಿದ್ದಿದ್ದ ಪದವಿ ಪೂರ್ವ ವಿಭಾಗದ 32 ಹುದ್ದೆಗಳನ್ನು ಮಂಜೂರು ಮಾಡಲು ಸೂಕ್ತ ರೀತಿಯ ಕ್ರಮ ಕೈಗೊಂಡಿದೆ. ಇಂತಹ ಶಿಕ್ಷಣ ಸಂಸ್ಥೆಯನ್ನು ಇಂದಿನ ಆಡಳಿತ ಮಂಡಳಿ ನಡೆಸಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಬೆಳವಣಿಗೆ ಮುಂದಿನ ಮಕ್ಕಳ ಭವಿಷ್ಯವನ್ನು ರೂಪಿಸಲಿದೆ.