ಅಂತರರಾಷ್ಟ್ರೀಯ ಮಟ್ಟದ Mrs. Global universe ಸೌಂದರ್ಯ ಸ್ಪರ್ಧೆಗೆ ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ ಆಯ್ಕೆ
ಇತ್ತಿಚೆಗೆ ಬೆಂಗಳೂರಿನ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ನಡೆದ "Miss & Mrs india Role Model-2024" ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕಂಡಂಗಾಲ ಮೂಲದ ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ "Mrs Coorg Scotland Queen" ಆಗಿ ಹೊರಹೊಮ್ಮಿದ್ದಾರೆ.
ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಿಗಳು ಆಗಮಿಸಿದರು. ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ "Mrs Coorg Scotland Queen" ಹೊರಹೊಮ್ಮಿದ್ದು, ಮುಂದಿನ ವರ್ಷ 2025ರಲ್ಲಿ ಸಿಂಗಾಪುರದಲ್ಲಿ ನಡೆಯುವ "Mrs. Global Universe" ಎಂಬ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇವರು ಕಂಡಂಗಾಲ ಮೂಲದ ಅಪ್ಪಂಡೇರಂಡ ನಿತಿನ್ ತಿಮ್ಮಯ್ಯ ಅವರ ಪತ್ನಿ, ಹಾಗೂ ಸುಳ್ಳಿಮಾಡ ಪೌತಿ ಉತ್ತಯ್ಯ ಹಾಗೂ ಬೋಜಮ್ಮ ದಂಪತಿಗಳ ಪುತ್ರಿ.