ಭಾಗ್ಯಲಕ್ಷ್ಮೀ ಬಾಂಡ್ ಪಡೆದಿದ್ದವರಿಗೆ ಹಣ ಹಾಕುವ ಸಿದ್ಧತೆಯ ವಿಚಾರವಾಗಿ ನೆನ್ನೆ ದಿನ ಬೆಳಗಾವಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 2 ದಿನದಿಂದ ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕ ಮಾಡಲಾಗುತ್ತಿದೆ. ಮೆಚ್ಯುರಿಟಿ ಎಷ್ಟು ಜನರದ್ದು ಆಗಿದೆಯೋ ಅವರಿಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುಂಚೆ ಭಾಗ್ಯಲಕ್ಷ್ಮೀ ಅಂತಾ ಅನೌನ್ಸ್ ಮಾಡಿದ್ದರು. ಈಗ ಅದರ ಹೆಸರು ಬದಲಾಗಿ ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ. ಈ ಹಿಂದೆ ಎಲ್‌ಐಸಿಯವರು ಬಾಂಡ್ ಕೊಡುತ್ತಿದ್ದರು. ಈಗ ಅಂಚೆ ಕಚೇರಿಯಿಂದ ಬಾಂಡ್ ಕೊಡುತ್ತಾರೆ ಎಂದಿದ್ದಾರೆ.
ಹೆಣ್ಣು ಮಗುವಿನ ಜನ್ಮ ಆದ ಕೂಡಲೇ ಈ ಯೋಜನೆಯಲ್ಲಿ ಇಂತಿಷ್ಟು ಹಣ ಇಡಲಾಗುತ್ತೆ. ಭಾಗ್ಯಲಕ್ಷ್ಮೀ ಹೆಸರು ಬದಲಾಗಿರಬಹುದು, ಆದರೆ ಯೋಜನೆ ಒಂದೇ ಆಗಿದೆ. 19 ವಯಸ್ಸಿಗೆ ವಿದ್ಯಾಭ್ಯಾಸಕ್ಕೆ ಬೇಕಾದ್ರೆ ಒಂದೂವರೆ ಲಕ್ಷ ಕೊಡುತ್ತೇವೆ. 21 ವಯಸ್ಸಿಗೆ ಬೇಕಾದ್ರೆ 1 ಲಕ್ಷ 80 ಸಾವಿರ ಹಣ ಕೊಡುತ್ತೇವೆ. ಈಗ 2 ಲಕ್ಷ ಫಲಾನುಭವಿಗಳಿಗೆ ಹಣ ಕೊಡುವುದಕ್ಕೆ ತಯಾರಿ ಆಗಿದೆ. ಇಲಾಖೆಯಿಂದ ಶೀಘ್ರದಲ್ಲೇ ಬಾಂಡ್ ಕೊಡುವ ಕಾರ್ಯಕ್ರಮ ಆಗುತ್ತೆ. ಸರ್ಕಾರಗಳು ಬದಲಾಗುತ್ತವೆ, ಆದರೆ ಯೋಜನೆ ಉಳಿದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.