ನಾಪೋಕ್ಲು ವ್ಯಾಪ್ತಿಯಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ
ವ್ಯಾಪ್ತಿಯಲ್ಲಿ ನೆನ್ನೆ ರಾತ್ರಿಯಿಂದ ಮಳೆ ಕಡಿಮೆಯಾದರೂ ಇಳಿಯದ ಪ್ರವಾಹ.ನಾಪೋಕ್ಲು -ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಇಳಿಯದ ಪ್ರವಾಹ
ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ ನೆನ್ನೆ 4ಅಡಿಯಷ್ಟು ರಸ್ತೆಗೆ ಬಂದಿದ್ದ ಕಾವೇರಿ ನದಿ ಪ್ರವಾಹ.ಇಂದು ಬೆಳಗ್ಗೆ ಅರ್ಧ ಅಡಿಯಷ್ಟು ಮಾತ್ರ ಇಳಿಕೆ ಕಂಡಿದೆ ವಾಹನ ಸಂಚಾರ ಸ್ಥಗಿತಗೊಂಡಿದೆ.
ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆಯಲ್ಲೂ ಇಳಿಯದ ಪ್ರವಾಹ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ಸಂಚರಿಸಿತ್ತಿರುವ ವಾಹನಗಳು.
ನಾಪೋಕ್ಲು -ಕೊಟ್ಟಮುಡಿ ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.ನಾಪೋಕ್ಲು ಕೈಕಾಡು,ಪಾರಾಣೆ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.
ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆಯಿಂದ ಮಳೆ ಬಿರುಸಿಕೊಂಡಿದ್ದು ಮತ್ತಷ್ಟು ಪ್ರವಾಹ ಬರುವ ಸಾಧ್ಯತೆ ಇದೆ.
ಮಳೆ ಹಿನ್ನೆಲೆ ಜಿಲ್ಲಾಡಳಿತದಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಹರ್ಷ ವ್ಯಕ್ತಪಡಿಸಿದ ಮಕ್ಕಳ ಪೋಷಕರು.