ಹೆಚ್.ಡಿ.ಕೋಟೆ
ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ಹೆಚ್. ಮಟಕೆರೆ ಗ್ರಾಮದ ನಿವಾಸಿಗಳಾದ ಜಯಮ್ಮ, ಸೋಮನಾಯಕ ಎಂಬುವರ ಮನೆಯ ಮೇಲ್ಚಾವಣಿ, ಮನೆಯ ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ಸೋಮನಾಯಕ ಅವರಿಗೆ ಗಾಯಗಳಾಗಿದ್ದು, ಮನೆಯಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ಚಾವಣಿ ಗೋಡೆ ಕುಸಿದ ಹಿನ್ನೆಲೆಯಲ್ಲಿ ಮನೆಯಲಿದ್ದ ಸಾಮಗ್ರಿಗಳು ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಲೆಕ್ಕಿಧಿಕಾರಿ ಗಂಗಾಧರ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಮನೆ ಕಳೆದುಕೊಂಡ ಸೋಮನಾಯಕ ಅವರ ಪತ್ನಿ ಜಯಮ್ಮ ಮಾತನಾಡಿ, ಮನೆ ಕಳೆದುಕೊಂಡ ತಮಗೆ ವಾಸಿಸಲು ಮನೆ ಇಲ್ಲದಂತಾದಿದ್ದು, ಸರ್ಕಾರದ ಪರಿಹಾರದ ಬದಲು ತಮಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.