Breaking News
   
   
   

ನಳಂದ- ಪ್ರಮಾಣವಚನ ಸ್ವೀಕಾರ ಸಮಾರಂಭ’

ಕೊಡಗು

news-details

ನಳಂದ ಪ್ರಮಾಣವಚನ ಸ್ವೀಕಾರ ಸಮಾರಂಭ'
ನಳಂದ ಗುರುಕುಲ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ನಳಂದ ಇಂಟರ್‌ನ್ಯಾಷನಲ್ ಇಂಡಿಪೆಂಡೆಟ್ ಪ್ರಿಯುನಿವರ್ಸಿಟಿ ಕಾಲೇಜಿನಲ್ಲಿ ಜುಲೈ 13, 2024 ರಂದು ವಿದ್ಯಾರ್ಥಿ ಪರಿಷತ್ತಿನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೇದಿಕೆಯಾಗಿದ್ದು ಅಥಿತಿಗಳನ್ನು ಗೌರವ ಆದರಗಳೊಂದಿಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಸಮಾರಂಭವು ನಾಮ್‌ಗೇಲ್ ನ್ಯುಂಡುಪ್‌ರವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾದ ಲೆಫ್ಟಿನೆಂಟ್ ಕರ್ನಲ್ ಕೆ. ಎಂ. ನಾಚಪ್ಪರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಗತ ಭಾಷಣ ಮಾಡಿದ ಕುಮಾರಿ ನೀತಿ ಕೆ ಪಿ. ಯು ಸಮಾರಂಭದ ಗಣ್ಯರನ್ನು ಹಾಗೂ ಅಲ್ಲಿ ನೆರೆದಿದ್ದವರನ್ನು ಸ್ವಾಗತಿಸಿದರು. ನಂತರ ಸಮಾರಂಭದ ಟ್ರಸ್ಟ್‌ನ ನಿರ್ದೇಶಕರಾದ ದೇವಿ ಪೂನಚ್ಚರವರು, ಶೈಕ್ಷಣಿಕ ಸಲಹೆಗಾರರಾದ ಎಫ್.ಎ.ಎಸ್. ಸುರೇಂದ್ರರವರು, ಮಖ್ಯ ಶೈಕ್ಷಣಿಕ ಅಧಿಕಾರಿಯಾದ ಮೇರಿ ಫಾತಿಮಾರವರು, ಶಾಲೆಯ ಪ್ರಾಂಶುಪಾಲರಾದ ಡಾ. ಸಿ ಅಂತೋಣಿ ರಾಜ್‌ರವರು, ಕಾಲೇಜಿನ ಪ್ರಾಶುಪಾಲರಾದ ಶಾಜಿ ಆಲುಂಗಲ್ ಜೋಸೆಫ್, ಇವರೆಲ್ಲರೂ ಸೇರಿ ಗೌರವ ಆದರಗಳಿಂದ ಮುಖ್ಯ ಅತಿಥಿಯನ್ನು ಸನ್ಮಾನಿಸಿದರು.
ವಿದ್ಯಾರ್ಥಿ ಪರಿಷತ್ತಿನ ಚುನಾಯಿತರಾಗಿ ಆಯ್ಕೆಯಾದಂತಹ ಕಾಲೇಜಿನ ವಿದ್ಯಾರ್ಥಿ ನಾಯಕ ಮೊಹಮ್ಮದ್ ಕಾಶಿಫ್, ಉಪನಾಯಕ ರೋಹಿತ್ ಬಿ ಅರಸ್, ಶಾಲೆಯ ವಿದ್ಯಾರ್ಥಿ ನಾಯಕಿ ಶರಣ್ಯ ಎಂ. ಎಸ್. ಉಪನಾಯಕಿ ಮೀಹಾ ಸೆಹೆರ್, ಕ್ರೀಡಾ ನಾಯಕ ಸೂರ್ಯ ಗಣಪತಿ. ಪಿ. ಹಾಗೂ ಶಾಲಾ- ಕಾಲೇಜಿನ ನಾಲ್ಕು ಗುಂಪಿನ ನಾಯಕರು ಹಾಗೂ ಉಪನಾಯಕರು ಪ್ರಮಾಣವಚನ ಸ್ವೀಕರಿಸಲು ಮುಖ್ಯ ಅತಿಥಿಗಳು ಚಾಲನೆ ನೀಡಿದರು. ಹಾಗೂ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿದರು. ನಂತರ ಅನುಕ್ರಮವಾಗಿ ಕಾಲೇಜಿನ ವಿದ್ಯಾರ್ಥಿ ನಾಯಕ ಹಾಗೂ ಶಾಲೆಯ ವಿದ್ಯಾರ್ಥಿ ನಾಯಕಿಯರಿಬ್ಬರೂ ತಮ್ಮನ್ನು ಆಯ್ಕೆ ಮಾಡಿದವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಶಾಲೆ ಮತ್ತು ಕಾಲೇಜಿನ ಅಭಿವೃದ್ಧಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತೇವೆಂದು ಭರವಸೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಯಾದ ನಾಚಪ್ಪರವರು 'ಒಬ್ಬ ನಾಯಕನು ನಿರ್ದಿಷ್ಟ ನಡವಳಿಕೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಬೇಕು. ನಾಯಕನಾದವನು ಎಲ್ಲರನ್ನು ಸಮಾನವಾಗಿ ನೋಡುವ ಧೈರ್ಯವಂತ ವ್ಯಕ್ತಿಯಾಗಿರಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಚಿಂತಿಸಬೇಕು' ಎಂಬ ಮಾತುಗಳೊಂದಿಗೆ ಮಕ್ಕಳಿಗೆ ಉತ್ತೇಜನ ನೀಡಿದರು.
ವಿದ್ಯಾರ್ಥಿ ನಿರೂಪಕಿಯರಾದ ಫರೀನ್ ಖಾನ್ ಹಾಗೂ ಯಶಸ್ವಿನಿ ಯು.ಪಿ.ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ದೈಹಿಕ ಶಿಕ್ಷಕರಾದ ಶ್ರೀ ಪವಿತ್ರ ಕುಮಾರ್ ಹಾಗೂ ಶ್ರೀಮತಿ ಯಶೋಧ ಎ. ಬಿ.ರವರು ವಿದ್ಯಾರ್ಥಿ ಪರಿಷತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪೂರ್ವತರಬೇತಿಯನ್ನು ನೀಡಿದ್ದರು. ಶ್ರೀಮತಿ ಅಶ್ವಿನಿ ಗಣಪತಿ ಹಾಗೂ ಶ್ರೀಮತಿ ರಾಜೇಶ್ವರಿಯವರು ಸಂಚಾಲಕರಾಗಿ, ಶ್ರೀಮತಿ ಆನಂದಿ, ಶ್ರೀಮತಿ ರೆಣ್ಯ. ವೈ. ಕೆ. ರವರು, ಶ್ರೀಮತಿ ಗೀತಾ, ಪಿ.ಡಿ. ಮತ್ತು ಶ್ರೀಮತಿ ಶುಭ ಅಲೆಕ್ಸ್ ಮುಂತಾದವರು ಸಮಾರಂಭದ ಕೆಲವು ಜವಾಬ್ದಾರಿಗಳನ್ನು ತೆಗೆದುಕೊಂಡು ಸಮಾರಂಭವು ಯಶಸ್ವಿಯಾಗಲು ಕಾರಣರಾದರು.
ಈ ಸಂದರ್ಭದಲ್ಲಿ ಶಾಲಾ ಮತ್ತು ಕಾಲೇಜಿನ ಶಿಕ್ಷಕರು, ಉನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಕುಮಾರಿ ಸಫಾ ಅಲಿಷಾ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

news-details