ಕೂಡಿಗೆ : ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆ ಭರಿತ ಕೋಳಿ ಮೊಟ್ಟೆಗಳನ್ನು ವಿತರಿಸಿರುವ ಘಟನೆ ಕುರಿತು ಕೂಡಿಗೆ ಭಾಗದ ಫಲಾನುಭವಿ ಮಹಿಳೆ ದೂರಿದ್ದ ಸುದ್ದಿ ಟಿವಿ 1ನಲ್ಲಿ ಪ್ರಸಾರ ಬೆನ್ನಲ್ಲೇ ಬಸವನತ್ತೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಟರಾಜ್ ಹಾಗೂ ಶಿಶು ಕಲ್ಯಾಣ ಇಲಾಖೆ ಅಧಿಕಾಕಾರಿ ವಿಮಲ ಭೇಟಿ ನೀಡಿ ಮೊಟ್ಟೆಗಳನ್ನು ಪರಿಶೀಲನೆ ನಡೆಸಿದರು.
ಕೊಳೆತ ಮೊಟ್ಟೆ ಹಂಚಿಕೆಯಾಗಿರುವ ಬಗ್ಗೆ ವರದಿ ಪ್ರಸಾರ ಅಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಕೊಳೆತ ಮೊಟ್ಟೆಯನ್ನು ಯಾರಿಗೂ ಹಂಚಿಕೆ ಮಾಡದಂತೆ ಸೂಚನೆ ನೀಡಿದ್ದಾರೆ.
ವರದಿ - ಕೆ.ಆರ್ ಗಣೇಶ್ ಕೂಡಿಗೆ