Breaking News
   
   
   

ವಿಜೃಂಭಣೆಯಿಂದ ಜರುಗಿದ ವನಭದ್ರಕಾಳಿ ದೇವಿಯ ವನಭದ್ರಕಾಳಿ ಹಬ್ಬ

ಕೊಡಗು

news-details

ಗೋಣಿಕೊಪ್ಪ : ಎರಡು ವರ್ಷಕೊಮ್ಮೆ ಜರುಗುವ ಹಾತೂರು ವನಭದ್ರಕಾಳಿ ದೇವಿಯ ವನಭದ್ರಕಾಳಿ ಹಬ್ಬದಲ್ಲಿ ದೇವಿ ಭಕ್ತರಿಗೆ ಆಶೀರ್ವದಿಸಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು. ಮಂಗಳವಾರ ದಿನವಿಡೀ ಭಕ್ತರು ದೇವಿಯನ್ನು ಆರಾಧಿಸಿದರು.

 ಮಂಗಳವಾರ ಬೆಳಗ್ಗೆಯಿಂದ ವಿವಿಧ ರೀತಿಯ ಆಚರಣೆಗಳು ನಡೆದು, ಸಂಜೆ ಸಂಪನ್ನಗೊಂಡಿತು. ಸಂಜೆ ಮುಖ್ಯರಸ್ತೆಯ ಮೂಲಕ ದೇವಸ್ಥಾನಕ್ಕೆ ವನಭದ್ರಕಾಳಿ, ಕೊಂಗೇಪಂಡ ಕುಟುಂಬದ ಮೊಗ, ಕೇಳಪಂಡ ಕುಟುಂದ ಪೂತೆರೆ ಆಗಮಿಸಿದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಇಗ್ಗುತ್ತಪ್ಪ ಬೋಜೋ.. ಭದ್ರಕಾಳಮ್ಮೇ ಬೋಜೋ.. ಮಹಾದೇವ ಬೋಜೋ.. ಅಯ್ಯಪ್ಪ ಬೋಜೋ ಎಂದು ಭಕ್ತರು ಘೋಷಣೆ ಮೂಲಕ ಆಸ್ವಾಧಿಸಿಕೊಂಡರು. ದಾರಿಯುದ್ದಕ್ಕೂ ಹೂಮಾಲೆ, ನಿಂಬೆ ಹಣ್ಣಿನ ಮಾಲೆ ಹಿಡಿದು ದೇವರನ್ನು ಬರ ಮಾಡಿಕೊಂಡರು. ಕರೊನಾ ನಂತರ ಮೊದಲ ಬಾರಿಗೆ ವಿಜೃಂಭಣೆಯಿಂದ ಜರುಗಿದ ಕಾರಣ ಭಕ್ತರ ಸಂಖ್ಯೆ ಹೆಚ್ಚಿತ್ತು. ಸುಮಾರು ಒಂದು ಗಂಟೆ ಕಾಲ ವಾಹನಗಳು ನಿಂತಲ್ಲೆ ನಿಂತವು. ಹೊರ ಜಿಲ್ಲೆಯಿಂದ ಕೂಡ ಭಕ್ತರು ಆಗಮಿಸಿ ಹರಕೆ ಒಪ್ಪಿಸಿದರು.

 ಕೊಂಗೇಪಂಡ ಮತ್ತು ಕೇಳಪಂಡ ಕುಟುಂಬದಿಂದ ಪಾಳ್ಗೊಳ್ಳುವ ಮೊಗ ಮತ್ತು ಪೂತೆರೆಯನ್ನು ವನಭದ್ರಕಾಳಿ ದೇವಿ ಸ್ವಾಗತಿಸಿಕೊಂಡಿತು. ಕೊಂಗೇಪಂಡ ಕುಟುಂಬದ ಐನ್‌ಮನೆಗೆ ತೆರಳಿ ಬರಮಾಡಿಕೊಂಡು, ನಂತರ ಕೇಳಪಂಡ ಐನ್‌ಮನೆಯಿಂದ ಹೊರಡುವ ಪೂತೆರೆಯನ್ನು ಕರೆದುಕೊಂಡು ಬರಲಾಯಿತು. ಪಣಿಕ ಜನಾಂಗದವರು ತೆರೆ ಕಟ್ಟಿ ನೃತ್ಯದ ಮೂಲಕ ದೇವರ ಆಚರಣೆ ಮಾಡಿದರು. ದುಡಿಕೊಟ್ಟ್ ನಡೆಸಿಕೊಟ್ಟರು.
 

news-details