Breaking News
   
   
   

ಗ್ರಾಮ ಪಂಚಾಯತ್‌ ಮಟ್ಟದ ಮುಕ್ತ ಹಾಕಿ ; ಕಿರಗೂರು, ಕಕ್ಕಬ್ಬೆ ಮಲ್ಮ ಬಿ ತಂಡ ಫೈನಲ್ ಗೆ ಎಂಟ್ರಿ

ಕೊಡಗು

news-details

ಪೊನ್ನಂಪೇಟೆ : ಕಳೆದ‌ ಮೂರು ದಿನಗಳಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಕಿಗ್ಗಟ್ಟ್ ನಾಡ್ ಫ್ಲೈಯಿಂಗ್ ಎಲ್ಬೋ ವತಿಯಿಂದ ಆಯೋಜಿಸಲಾಗಿರುವ 7A ಸೈಡ್ ಹಾಕಿ ಪಂದ್ಯಾವಳಿ ಯಲ್ಲಿ ಕಕ್ಕಬ್ಬೆ ಮಲ್ಮ ಬಿ ಹಾಗೂ ಕಿರಗೂರು ತಂಡಗಳು ಫೈನಲ್ ಪ್ರವೇಶಿಸಿವೆ. 


ಕಕ್ಕಬ್ಬೆ ಮಲ್ಮ-ಎ  ಕಕ್ಕಬ್ಬೆ ಮಲ್ಮಾ-ಬಿ ತಂಡಗಳ ಮಧ್ಯೆ ಮೊದಲ‌ ಸೆಮಿಫೈನಲ್ ಹಣಾಹಣಿ ನಡೆಯಿತು. ಇದರಲ್ಲಿ ಕಕ್ಕಬ್ಬೆ ಮಲ್ಮ ಬಿ ತಂಡ 5-1 ಗೋಲುಗಳ ಭರ್ಜರಿ ಜಯ ದಾಖಲಿಸಿತು. 


ಬೆಳಗ್ಗೆ ನಡೆದ ಮತ್ತೊಂದು ಸೆಮಿ ಹೋರಾಟದಲ್ಲಿ ಕಾಕೋಟು ಪರಂಬು ತಂಡ ಕಿರಗೂರು ತಂಡಗಳ‌ ರೋಚಕ ಹಣಾಹಣಿ ನಡೆಯಿತು. ಇದರಲ್ಲಿ ಕಿರಗೂರು ತಂಡ 3-4 ಗೋಲುಗಳ ರೋಚಕ ಜಯ ದಾಖಲಿಸಿ ಅಂತಿಮ‌ ಹಂತ ಪ್ರವೇಶಿಸಿತು.
 

news-details