Breaking News
   
   
   

ಹುಣಸೂರು ತಾಲೂಕಿನ ವಿವಿಧೆಡೆ 6.5 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಮಂಜುನಾಥ್ ಚಾಲನೆ

ಮೈಸೂರು

news-details

ಹುಣಸೂರು : ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 6.5. ಕೊಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ತಾಲೂಕಿನ ತಿಪ್ಪಲಾಪುರದಲ್ಲಿ ಸ್ಥಳೀಯ ಪ್ರತಿನಿಧಿಗಳೊಂದಿಗೆ ಲೋಕೋಪಯೋಗಿ ಇಲಾಖೆಯ 1.5 ಕೋಟಿರೂ ವೆಚ್ಚದಡಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಸಿದ್ದರಾಮಯ್ಯರ ಅವಧಿಯಲ್ಲೇ ಮಂಜೂರಾಗಿರುವ ಕಾಮಗಾರಿಗಳು, ತಾವು ಸೋತ ನಂತರ ಸ್ಥಗಿತಗೊಂಡಿತ್ತು. ನಂತರದಲ್ಲಿ ಮತ್ತೆ ಆಯ್ಕೆಯಾದ ಎರಡು ತಿಂಗಳಿನಲ್ಲೇ ಕೊರೊನಾದಿಂದಾಗಿ ಲಾಕ್ ಡೌನ್ ಘೋಷಣೆಯಾಯಿತು. ಆನಂತರದಲ್ಲಿ ಅಭಿವೃದ್ದಿ ಎಂಬುದು ಕನಸಾಗಿತ್ತದರೂ ಕಳೆದ ಆರು ತಿಂಗಳಿನಿಂದ ಸರಕಾರ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ಇದೀಗ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಫೆಬ್ರವರಿ ಅಂತ್ಯದಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ಕಾಮಗಾರಿ ನಡೆಯುವ ವೇಳೆ ಮುಖಂಡರು ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಮನವೊಲಿಸುವ ಮೂಲಕ ಉತ್ತಮ ಕಾಮಗಾರಿ ನಡೆಯುವಂತೆ ನೋಡಿಕೊಳ್ಳ. ಕಳಪೆ ಕಂಡುಬಂದಲ್ಲಿ ದೂರು ನೀಡಲು  ಸೂಚಿಸಿದರು.


ಎಲ್ಲೆಲ್ಲಿ ಕಾಮಗಾರಿ:


ಹುಣಸೂರು-ತಿಪ್ಪಲಾಪುರ ರಸ್ತೆಗೆ 1.5 ಕೋಟಿರೂ, ಹಿರಿಕ್ಯಾತನಹಳ್ಳಿಗೆ 1.10 ಕೋಟಿರೂ, ಮಂಗಳೂರು ಮಾಳ ರಸ್ತೆಗೆ 82 ಲಕ್ಷ, ಮಲ್ಲಿನಾಥಪುರಕ್ಕೆ ಲೋಕೋಪಯೋಗಿ ಇಲಾಖೆ 30 ಲಕ್ಷ, ಜಿ.ಪಂ.33 ಲಕ್ಷ, ಕೆ.ಆರ್.ಡಿ.ಸಿ.ಎಲ್. 30 ಲಕ್ಷ ಸೇರಿ ಒಟ್ಟು 93 ಲಕ್ಷರೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 6.5 ಲಕ್ಷರೂ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಬೋಜರಾಜ್ ಮಾಹಿತಿ ನೀಡಿದರು.


ಈ ವೇಳೆ ಯಜಮಾನ ವೆಂಕಟೇಶಗೌಡ, ಗ್ರಾ.ಪಂ.ಸದಸ್ಯ ರವಿಕುಮಾರ್, ಶೈಲಜ, ಜೈಸ್ವಾಮಿ, ವಿ.ಎಸ್.ಎಸ್.ಎನ್.ಅಧ್ಯಕ್ಷ ಶಿವರಾಜು, ನಾಗನಹಳ್ಳಿಬೊಮ್ಮೇಗೌಡ, ಮುಖಂಡರಾದ ಜಯಣ್ಣ, ಸೋಮೇಗೌಡ, ರಾಮಕೃಷ್ಣ, ಚನ್ನಯ್ಯ, ನಾಗೇಗೌಡ, ಶಿವಕುಮಾರ್, ಗೋವಿಂದೇಗೌಡ, ನಿಂಗೇಗೌಡ, ಪಾಪೇಗೌಡ, ಮೋದೂರು ಸ್ವಾಮಿಗೌಡ, ಎ.ಇ.ನರಸಿಂಹೇಗೌಡ, ಪಿಡಿಓ ಪ್ರದೀಪ್ಕುಮಾರ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
 

news-details