Breaking News
   
   
   

ಮಡಿಕೇರಿ ನಗರದಲ್ಲಿ ಸರ್ವಋತು ರಸ್ತೆಗಳ ನಿರ್ಮಾಣ ; ಶಾಸಕ ಅಪ್ಪಚ್ಚು ರಂಜನ್ ಹೇಳಿಕೆ

ಕೊಡಗು

news-details

ಮಡಿಕೇರಿ : ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು, ನಗರೋತ್ಥಾನದ 4ನೇ ಹಂತದಲ್ಲಿ ಮಡಿಕೇರಿ ನಗರಸಭೆಗೆ 40 ಕೋಟಿ ಮಂಜೂರಾಗಿದ್ದು, ರಸ್ತೆ ಮತ್ತು ಚರಂಡಿ ವ್ಯವಸ್ಥೆಗಾಗಿ 13.50 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗುವುದೆಂದು ತಿಳಿಸಿದರು. ಮಡಿಕೇರಿ ನಗರವ್ಯಾಪ್ತಿಯಲ್ಲಿ ಲಭ್ಯ ಅನುದಾನದ ಮೂಲಕ `ಸರ್ವ ಋತು ರಸ್ತೆ'ಗಳು ನಿರ್ಮಾಣವಾಗಲಿದೆ. ಈ ಬಗ್ಗೆ ಒಂದು ವಾರದೊಳಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪರೀವೀಕ್ಷಣೆ ನಡೆಸಲಾಗುವುದೆಂದು ತಿಳಿಸಿದರು.

news-details