Breaking News
   
   
   

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ರೈಫಲ್ ಶೂಟಿಂಗ್ ಸ್ಫರ್ಧೆ

ಕೊಡಗು

news-details

ಚೆಟ್ಟಳ್ಳಿ : ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ತೋಕ್ ನಮ್ಮೆ, ಕೊಕೊನಟ್ ಶೂಟಿಂಗ್ ಫೆಸ್ಟ್ ನಡೆಯಿತು. 

ಇಲ್ಲಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರು ವಿಭಾಗ ಮಾಡಿದ್ದು , 0.22 ಏರ್ ರೈಫಲ್, 12 ಗೇಜ್, 0.22 ರೈಫಲ್ ಎಂದು ವಿಂಗಡಿಸಲಾಗಿದ್ದು ಎಲ್ಲಾ ವಿಭಾಗಗಳಲ್ಲೂ ನೂರಕ್ಕಿಂತ ಹೆಚ್ಚು ಸ್ಪರ್ದಿಗಳು ಕೊಡಗಿನ ಹಾಗು ನೆರೆ ಜಿಲ್ಲೆ, ಹಾಗು  ರಾಜ್ಯಗಳಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. 

ಮೊದಲನೇ ವಿಭಾಗವಾದ ಏರ್ ರೈಫಲ್ ನಲ್ಲಿ ಸುಂಟಿಕೊಪ್ಪ ಅಂದಗೊವೆ ನಿವಾಸಿಯಾದ ಕೇಚಿರ ಶಬ್ದ್  ಬೆಳ್ಳಿಯಪ್ಪ ಮೊದಲನೇ ಸ್ಥಾನ ಗಳಿಸಿದರೆ, ಚೆಟ್ಟಳ್ಳಿಯ  ಪುತ್ತರಿರ ಕಾರ್ತಿಕ್ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನವನ್ನು ಸಿದ್ದಾಪುರದ ಪಟ್ಟಡ ಬೋಪಣ್ಣ ಪಡೆದರು. 

ಎರಡನೇ ವಿಭಾಗವಾದ 12 ಬೋರ್ ನಲ್ಲಿ, ಶರೀನ್ ಗಣಪತಿ ಮೊದಲನೇ ಸ್ಥಾನ ಗಳಿಸಿದರೆ, ಕ್ರಮವಾಗಿ ನಾಪಂಡ ಕಿರಣ್ ಪೊನ್ನಪ್ಪ ದ್ವಿತೀಯ  ಹಾಗು  ಅರಂಬೂರ್ ರಾಹುಲ್  ತೃತೀಯ ಸ್ಥಾನ ಪಡೆದುಕೊಂಡರು. 

ಸ್ಪರ್ಧೆಯ ಕೇಂದ್ರಬಿಂದುವಾದ 0.22 ವಿಭಾಗದಲ್ಲಿ ಚೆಟ್ಟಳ್ಳಿಯ ಪುತ್ತರಿರ ನಂಜಪ್ಪ ಪ್ರಥಮ ಸ್ಥಾನ ಗಳಿಸಿದರೆ, ನೆರೆ ರಾಜ್ಯದ ಷಾಜಿ ಮ್ಯಾತ್ಯು ದ್ವಿತೀಯ ಸ್ಥಾನ ಗಳಿಸಿ, ವರುಣ್ ಕಳ್ಳಿಚಂಡ ತೃತೀಯ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು
ಸಂಜೆ ನಡೆದ ಸರಳ ಸಮಾರಂಭದಲ್ಲಿ ಎಲ್ಲಾ ವಿಭಾಗಗಳ ವಿಜೇತರಿಗೆ ಟ್ರೋಫಿ ಹಾಗು ನಗದನ್ನು ವಿತರಿಸಲಾಯಿತು. 

ಬಹುಮಾನ ಪುಗ್ಗೆರ ದಿನೇಶ್ ದೇವಯ್ಯ, ನೆಲ್ಲಮಕ್ಕಡ ಸ್ಯಾಂಕಿ ಪೂವಣ್ಣ, ಅಚಿಯಂಡ ಮದನ್ ಚೆಂಗಪ್ಪ, ಚೋವಂಡ ಅಭಿನ್ ಮಂದಣ್ಣ, ನೆಲ್ಲಮಕ್ಕಡ ಶರತ್ ಸೋಮಣ್ಣ ಪ್ರಾಯೋಜಿಸಿದ್ದರು. 

ಕಾರ್ಯಕ್ರಮದಲ್ಲಿ ಅಮ್ಮತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಅಲ್ಲಾರಂಡ ದೀಪಕ್ ಅಪ್ಪಯ್ಯ, ಸೆಕ್ರೆಟರಿ ಬೊಮ್ಮಂಡ ಚಕ್ರವರ್ತಿ ಪೊನ್ನಣ್ಣ, ನಿರ್ದೇಶಕರುಗಳಾದ,  ಕಂಬೆಯಂಡ ಭೋಜಣ್ಣ, ಮಂಡೇಪಂಡ ಗಣಪತಿ, ಕುಟ್ಟಂಡ ಪೂಣಚ್ಚ, ಉದ್ದಪಂಡ ಭವಿಷ್ ಮತ್ತಿತರರು ಹಾಜರಿದ್ದರು.

news-details