ಕುಶಾಲನಗರ : ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ ಭಕ್ತಜನಸಾಗರದ ನಡುವೆ ವಿಜೃಂಭಣೆಯಿಂದ ನಡೆಯಿತು.
ಗಣಪತಿ ದೇವಾಲಯದ ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು. ಬಳಿಕ ರಥಕ್ಕೆ ಪೂಜೆ ಸಲ್ಲಿಸಿ ದೇವರ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಲಾಯಿತು.
ಸಹಸ್ರಾರು ಸಂಖ್ಯೆಯ ಭಕ್ತ ಸಮೂಹ ರಥವನ್ನು ಎಳೆದು ಪುನಿತಾರಾದರು. ಈ ಸಂದರ್ಭ ರಥದ ಮುಂದೆ ಅಯ್ಯಪ್ಪ ಭಕ್ತರು ಕರ್ಪೂರ ಹಚ್ಚಿ ಘೋಷಣೆ ಕೂಗಿದರು. ರಥದ ಮುಂದೆ ಹಣ್ಣುಕಾಯಿ ಒಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಕುಶಾಲನಗರ ಗಣಪತಿ ದೇವಾಲಯದಿಂದ ಆಂಜನೇಯ ದೇವಾಲಯದ ವರೆಗೆ ರಥೋತ್ಸವ ನಡೆಯಿತು.