ಹುಣಸೂರು : ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಶಾಸಕ ಎಚ್.ಪಿ ಮಂಜುನಾಥ್ ರವರ ಕಾರ್ಯವೈಖರಿ ಹಾಗೂ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೆಚ್ಚಿ 50ಕ್ಕೂ ಹೆಚ್ಚು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಚ್ ಪಿ ಮಂಜುನಾಥ್ ರವರ ಪರ ದುಡಿದು ಮತ್ತೆ ಹುಣಸೂರು ತಾಲೂಕಿನ ಶಾಸಕರಾಗಿ ಆಯ್ಕೆಯಾಗಲು ಶ್ರಮಿಸುವುದಾಗಿ ತಿಳಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಹಿರಿಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜವರೇಗೌಡರು ಸೇರಿದಂತೆ ಗ್ರಾಮದ ಪ್ರಮುಖ ಮುಖಂಡರಾದ ಹೆಚ್ಎನ್ ಶಿವಪ್ಪ, ಲಿಂಗರಾಜು, ಕೆ ಸುರೇಶ್, ಶಿವಣ್ಣ, ಮಹದೇವ್, ಸ್ವಾಮಿ, ಕೃಷ್ಣೆಗೌಡ, ಅಶೋಕ, ಅಂಗಡಿ ಮಂಜು, ಸಂಪತ್, ಡೇರಿ ಉಪಾಧ್ಯಕ್ಷ ಗಣೇಶ್, ನವೀನ, ವಿಶ್ವನಾಥ್, ಸೋಮಣ್ಣ, ಜಯಕುಮಾರ್, ವಿಜಯ ಕುಮಾರ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ವೇಳೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ದೇವರಾಜ್, ಉದ್ಯಮಿ ಎಚ್ ಪಿ ಅಮರನಾಥ್, ಜಗದೀಶ್, ಉದಯ್, ಕ್ರೇಜಿ ಮಹೇಶ್, ಹರೀಶ್, ಪುಟ್ಟರಾಜು, ಸುರೇಶ್ , ಯೋಗಣ್ಣ ಸೇರಿದಂತೆ ಇತರೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.