ಮೈಸೂರು : ಜಾತ್ಯತೀತ ಜನತಾದಳದ ರಾಜ್ಯ ವಕ್ತಾರರಾಗಿ ನೇಮಕಗೊಂಡ ಪಕ್ಷದ ಹಿರಿಯ ಮುಖಂಡರಾದ ಸಂಕೇತ್ ಪೂವಯ್ಯ ಅವರನ್ನು ಮೈಸೂರಿನಲ್ಲಿ ವಕೀಲರು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು, ಜೆಡಿಎಸ್ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ದುಡಿದ ಹಿನ್ನೆಲೆಯಲ್ಲಿ ತಮ್ಮ ಶ್ರಮವನ್ನು ಗುರುತಿಸಿದ ಪಕ್ಷದ ವರಿಷ್ಟರು, ತಮ್ಮನ್ನು ಪಕ್ಷದ ರಾಜ್ಯ ವಕ್ತಾರರಾಗಿ ನೇಮಕಗೊಳಿಸಿದ್ದು, ಪಕ್ಷದ ವರಿಷ್ಟರ ಸೂಚನೆಯಂತೆ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರಲ್ಲದೇ, ತಮ್ಮನ್ನು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಿದ ಮೈಸೂರಿನ ವಕೀಲರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ವಕೀಲರುಗಳಾದ ಎನ್.ಲೋಹಿತ್, ಹರದೂರು ಜವರೇಗೌಡ, ಗುಂಗ್ರಾಲ್ ಛತ್ರ ರಘು, ಚಿಟ್ಟೇನಹಳ್ಳಿ ಲೋಕೇಶ್, ಮಾವಿನಹಳ್ಳಿ ಸತೀಶ್, ಡಾ.ನಾಗರಾಜಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.