ಮಡಿಕೇರಿ, ನ.2 : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ 4 ಮಂದಿ ಆರೋಪಿಗಳ ಪತ್ತೆಗೆ ಎನ್‌ಐಎ ಬಲೆ ಬೀಸಿದ್ದು ಮಹಮ್ಮದ್ ಮುಸ್ತಫಾ, ತುಫೈಲ್, ಉಮ್ಮರ್ ಫಾರೂಕ್, ಅಬೂಬಕರ್ ಸಿದ್ದೀಕ್ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ. ಆರೋಪಿಗಳ ಪತ್ತೆಗೆ ಎನ್‌ಐಎ ಲುಕ್ ಔಟ್ ನೋಟಿಸ್ ಹೊರಡಿಸಿದ್ದು, ನಾಲ್ವರು ಆರೋಪಿಗಳ ಬಗ್ಗೆ ಸುಳಿವು ನೀಡಿದರೆ ಎನ್‌ಐಎ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಬೆಳ್ಳಾರೆ ನಿವಾಸಿ ಮೂಡುಮನೆ ಮಹಮ್ಮದ್ ಮುಸ್ತಫಾ ಸುಳಿವು ನೀಡಿದರೆ ಐದು ಲಕ್ಷ ರೂಪಾಯಿ ಬಹುಮಾನ, ಮಡಿಕೇರಿ ಗದ್ದಿಗೆ ಮಸೀದಿ ಪಕ್ಕದ ನಿವಾಸಿ ತುಫೈಲ್‌ನ ಸುಳಿವು ನೀಡಿದರೆ ಐದು ಲಕ್ಷ ರೂಪಾಯಿ ಬಹುಮಾನ, ಸುಳ್ಯದ ಕಲ್ಲುಮುಟ್ಟು ನಿವಾಸಿ ಉಮ್ಮರ್ ಫಾರೂಕ್‌ನ ಸುಳಿವು ನೀಡಿದರೆ ಎರಡು ಲಕ್ಷ ರೂಪಾಯಿ ಬಹುಮಾನ ಮತ್ತು ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದೀಕ್‌ನ ಸುಳಿವು ನೀಡಿದರೆ ಎರಡು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿದೆ. ಈ ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆಯ ಸಕ್ರೀಯ ಸದಸ್ಯರಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು.