ಮಡಿಕೇರಿ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಅಲ್ತಾಫ್ ಅಹಮದ್ ಅವರ ಕುಟುಂಬಕ್ಕೆ ಸರಕಾರ ನಿವೇಶನ ಮಂಜೂರು ಮಾಡಿದೆ.
ವೀರಾಜಪೇಟೆಯ ನಿವಾಸಿಯಾಗಿದ್ದ ಯೋಧ ಅಲ್ತಾಫ್ ಅಹಮದ್ ಅವರು ಜಮ್ಮುಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಹಿಮಪಾತಕ್ಕೆ ಸಿಲುಕಿ ಫೆ.23ರಂದು ಸಾವನ್ನಪ್ಪಿದ್ದರು. ಸ್ವಂತ ಸೂರಿಲ್ಲದೇ ವೀರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೃತ ಯೋಧನ ಕುಟುಂಬಕ್ಕೆ ಸರಕಾರದ ವತಿಯಿಂದ ನಿವೇಶನ ಮಂಜೂರು ಮಾಡುವಂತೆ ಮೃತ ಯೋಧನ ಪತ್ನಿ ಜುಬೇರಿಯಾ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲ್ಲೂಕು, ಅಮೃತ್ತಿ ಹೋಬಳಿಯ ಚನ್ನಯ್ಯನಕೋಟಿ ಗ್ರಾಮದ ಸ.ನಂ. 33/1 ರಲ್ಲಿ 5 ಸೆಂಟ್ ಜಾಗವನ್ನು ಮಂಜೂರು ಮಾಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಆದೇಶಿಸಿದ್ದಾರೆ.
ಕರ್ನಾಟಕ ಭೂ ಮಂಜೂರಾತಿ ನಿಯಮ-1969 ರ ನಿಯಮ 868) ರಡಿ ಮಂಜೂರು ಮಾಡಿದ ಜಾಗವನ್ನು ನಿವೇಶನಕ್ಕಾಗಿ ಬಳಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.