Breaking News
   
   
   

ಕೃಷಿಕ ಸೋಮೆಂಗಡ ಗಣೇಶ್ ತಿಮ್ಮಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕೊಡಗು

news-details

ಮಡಿಕೇರಿ : ನಲ್ಲೂರು ಗ್ರಾಮದ  ಕೃಷಿಕ ಸೋಮೆಂಗಡ  ಗಣೇಶ್  ತಿಮ್ಮಯ್ಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಸಮಗ್ರ ಕೃಷಿಯಲ್ಲಿನ ಸಾಧನೆಗಾಗಿ ರಾಜ್ಯ ಸರ್ಕಾರ  ತಿಮ್ಮಯ್ಯ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿದೆ.  
 ಕೊಡಗಿನ ಕೃಷಿಕನನ್ನು ಕೊನೆಗೂ ಸರ್ಕಾರ ಗುರುತಿಸಿದ್ದು ಸಂತೋಷ ತಂದಿದೆ ಎಂದು ಟಿವಿ 1 ಗೆ ಸೋಮೆಂಗಡ ಗಣೇಶ್ ತಿಮ್ಮಯ್ಯ ಹೇಳಿದ್ದಾರೆ. 

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯೊಂದಿಗೆ ಗಣೇಶ್‌ ಅವರಿಗೆ ಈ ಮೊದಲು ಕೇಂದ್ರ ಸರ್ಕಾರದಿಂದ ಜಗಜೀವನರಾಮ್ ಅಭಿನವ ಕೖಷಿ ಪುರಸ್ಕಾರದೊಂದಿಗೆ  ಐಸಿಆರ್ ಐಎಚ್ ಆರ್ ನಿಂದಲೂ  ಅತ್ಯುತ್ತಮ ಕೖಷಿಕ ಪ್ರಶಸ್ತಿ ಲಭಿಸಿದೆ. 
 
15 ಎಕ್ರೆ. ಜಮೀನಿನಲ್ಲಿ  ಕಾಫಿ, ಭತ್ತ, ಕರಿಮೆಣಸು, ತರಕಾರಿ  ಬೆಳೆ, ಕೋಳಿ, ಜೇನು , ಮೀನು , ಹಸು ಸಾಕಾಣೆ ಯೊಂದಿಗೆ ಸಮಗ್ರ ಕೃಷಿಯಲ್ಲಿ ತೊಡಗಿರುವ ಗಣೇಶ್‌ ಅವರು ಐಎಎಸ್ ಅಧಿಕಾರಿಗಳಿಗೂ ಸಮಗ್ರ  ಕೖಷಿ ತರಬೇತಿ ನೀಡಿದ್ದಾರೆ. ಮಸ್ಸೂರಿಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿದ್ದ ಅಧಿಕಾರಿಗಳಿಗೆ ಏಪ್ರಿಲ್ ನಲ್ಲಿ ಗಣೇಶ್ ತರಭೇತಿ ನೀಡಿದ್ದರು.  

ಇನ್ನೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದ ಬಗ್ಗೆ  ಪ್ರತಿಕ್ರೀಯಿಸಿರುವ ಸೋಮೆಂಗಡ  ಗಣೇಶ್  ತಿಮ್ಮಯ್ಯ, ಕೃಷಿಯನ್ನು ಪರಿಗಣಿಸಿದ್ದು ಸಂತೋಷ ತಂದಿದೆ. ತಡವಾಗಿಯಾದರೂ ಕೃಷಿಕರನ್ನು ಗುರುತಿಸಿದ್ದಾರೆ. ಕೃಷಿಯನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು 30 ವಷ೯ಗಳಿಂದ ಮಾಡುತ್ತಿರುವೆ. ಕೃಷಿಯ ಮಹತ್ವದ ಬಗ್ಗೆ ಎಲ್ಲಾ ಕಡೆ ಜಾಗ್ರತಿ ಉಂಟು ಮಾಡುತ್ತಿದ್ದೇನೆ. ಪ್ರಶಸ್ತಿ ಲಭಿಸಿದ್ದು ಸಮಧಾನ ತಂದಿದೆ. ಪ್ರಶಸ್ತಿ ಕೆಲಸಕ್ಕೆ ಮತ್ತಷ್ಟು ಸ್ಪೂತಿ೯ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

news-details